ದೆಹಲಿಯಲ್ಲೊಬ್ಬ ವಯೋವೃದ್ಧನಿಂದ ಉಚಿತ ಆ್ಯಂಬುಲೆನ್ಸ್ ಆಟೋ ಸೇವೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.12- ಹೆಚ್ಚಿನ ದುಡ್ಡು ಸಂಪಾದಿಸಲು ಕೆಲ ಆಟೋ ಚಾಲಕರು ಓವರ್ ಡ್ಯೂಟಿ ಮಾಡುವುದನ್ನು ನೋಡಿದ್ದೇವೆ. ಇಲ್ಲೊಬ್ಬ ತನ್ನ 76 ವರ್ಷದ ಇಳಿವಯಸಿನಲ್ಲೂ ಅಪಘಾತದಂತಹ ತುರ್ತು ಪರಿಸ್ಥಿತಿಗಾಗಿಯೇ ಆ್ಯಂಬುಲೆನ್ಸ್ ರೀತಿ ಉಚಿತ ಆಟೋ ಸೇವೆ ಒದಗಿಸುತ್ತಿದ್ದಾರೆ.

ಆಟೋ ಚಾಲಕ ಹರಜಿಂದರ್ ಸಿಂಗ್ ಅವರು ತಮ್ಮ ದಿನದ ಕರ್ತವ್ಯ ಮುಗಿಸಿದ ನಂತರ ಉಳಿದ ಅವಧಿಯಲ್ಲಿ ಹೆಚ್ಚು ಅಪಘಾತ ನಡೆಯುವ ಸ್ಥಳಗಳಲ್ಲಿ ಅಡ್ಡಾಡಿಕೊಂಡಿರುತ್ತಾರೆ.

ಸಮಯಕ್ಕೆ ಆ್ಯಂಬುಲೆನ್ಸ್ ಬರದಿದ್ದರೂ ಕರ್ತವ್ಯಪ್ರಜ್ಞೆಯಿಂದ ಇವರು ರೋಗಿಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ ಜೀವದಾನಕ್ಕೆ ಕಾರಣರಾಗಿದ್ದಾರೆ. ಎಷ್ಟೋ ಅಪಘಾತಗಳನ್ನು ನೋಡಿದ್ದೇನೆ. ಸಮಯಕ್ಕೆ ಸರಿಯಾಗಿ ವಾಹನಗಳು ದೊರೆಯದೆ ಇದ್ದಾಗ ಗಾಯಾಳುಗಳ ಪರದಾಟವನ್ನು ಗಮನಿಸಿದ್ದೇನೆ.

ದಿನಕ್ಕೆ ಒಬ್ಬರನ್ನಾದರೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ದು ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಸಂತೃಪ್ತಿ ಇದೆ ಎಂದು ಹರಜಿಂದರ್ ಹೇಳುತ್ತಾರೆ.

ಹರಜಿಂದರ್ ಅವರ ಆಟೋ ಆ್ಯಂಬುಲೆನ್ಸ್ ಆಸ್ಪತ್ರೆಗೆ ಉಚಿತ ಪ್ರಯಾಣವಷ್ಟೇ ಅಲ್ಲದೆ ತುರ್ತು ಸಂದರ್ಭದಲ್ಲಿ ಸಂತ್ರಸ್ತರಿಗೆ ಪ್ರಥಮ ಚಿಕಿತ್ಸೆಯನ್ನೂ ಕೂಡ ನೀಡುತ್ತಾರೆ. ಈ ಇಳಿವಯಸ್ಸಿನಲ್ಲೂ ಸಾರ್ಥಕ ಸೇವೆ ಮೆರೆದಿದ್ದಾರೆ.

ಈ ಮೊದಲು ಪ್ರಥಮ ಚಿಕಿತ್ಸೆಗೆ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ಇದಕ್ಕಾಗಿಯೇ ಪ್ರಥಮ ಚಿಕಿತ್ಸೆಯ ಕೋರ್ಸ್ ಮಾಡಿ ಗಾಯಾಳುಗಳನ್ನು ಪ್ರಾಥಮಿಕ ಹಂತದಲ್ಲಿ ಶುಶ್ರೂಷೆ ಮಾಡಬೇಕೆಂಬುದನ್ನು ತಿಳಿದುಕೊಂಡಿದ್ದೇನೆ ಎನ್ನುತ್ತಾರೆ.

ಎಷ್ಟೋ ಪ್ರಕರಣಗಳಲ್ಲಿ ಅಪಘಾತ ಸಂಭವಿಸಿದಾಗ ಸಮಯಕ್ಕೆ ಸರಿಯಾಗಿ ವಾಹನಗಳು ದೊರೆಯದೆ ರಸ್ತೆಯಲ್ಲಿ ಸಾವನ್ನಪ್ಪುತ್ತಾರೆ. ಜನ ಸುಮ್ಮನೆ ನೋಡುತ್ತಾ ನಿಂತಿರುತ್ತಾರೆ. ಅವರಲ್ಲಿ ನಾನು ಒಬ್ಬನಾಗಲು ನಾನು ಬಯಸುವುದಿಲ್ಲ ಎಂದು ಹರಜಿಂದರ್ ಹೇಳುತ್ತಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ