ಮೋದಿ ಅಪ್ಪಟ ಅಭಿಮಾನಿಯ ಉಚಿತ ಆಟೋ ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

ಭಟ್ಕಳ, ಮೇ 30- ನರೇಂದ್ರ ಮೋದಿ ಇಂದು ಪ್ರಧಾನಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಭಟ್ಕಳದ ಆಟೋ ಚಾಲಕರೊಬ್ಬರು ಇಂದು ಇಡೀ ದಿನಪೂರ್ತಿ ಪ್ರಯಾಣಿಕರಿಗೆ ಉಚಿತ ಸೇವೆ ನೀಡುತ್ತಿದ್ದಾರೆ.

ಚಂದ್ರು ನಾಯ್ಕ್ ಮೋದಿಯವರ ಅಪ್ಪಟ ಅಭಿಮಾನಿ ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿ ಆಗುತ್ತಿರುವುದಕ್ಕೆ ಅಪಾರ ಹರ್ಷ ವ್ಯಕ್ತಪಡಿಸಿರುವ ಅವರು ಇಂದು ರಾತ್ರಿವರೆಗೆ ಭಟ್ಕಳ ನಗರದಲ್ಲಿ ಪ್ರಯಾಣಿಕರಿಗಾಗಿ ಉಚಿತ ಸಾರಿಗೆ ಸೇವೆ ಒದಗಿಸುತ್ತಿದ್ದಾರೆ.

ಪ್ರಯಾಣಿಕರ ಬಳಿ ಹೋಗಿ ತಮ್ಮ ಸದುದ್ದೇಶವನ್ನು ತಿಳಿಸಿ ಅವರು, ತೆರಳಬೇಕಾದ ಸ್ಥಳಗಳಿಗೆ ಅವರನ್ನು ಉಚಿತವಾಗಿ ತಲುಪಿಸಿ ಮೋದಿ ಮೇಲೆ ತಮಗಿರುವ ಪ್ರೀತಿ ಮತ್ತು ಅಭಿಮಾನವನ್ನು ಸಮಾಜಸೇವೆ ಮೂಲಕ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗುವ ಕ್ಷಣಕ್ಕೆ ಸಾಕ್ಷಿ ಯಾಗಲು ರಾಷ್ಟ್ರಪತಿ ಭವನ ಸಜ್ಜಾಗಿದೆ. ರಾಷ್ಟ್ರಪತಿ ಭವನದ ಹೊರಾಂಗಣದಲ್ಲಿ ಮೋದಿ ದೇಶದ ಪ್ರಧಾನಿಯಾಗಿ ನಾಳೆ ಸಂಜೆ 7 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ರೀತಿ ಹೊರಾಂಗಣ ದಲ್ಲಿ ಪ್ರಮಾಣ ಸ್ವೀಕರಿಸುತ್ತಿರುವ ಮೂರನೇ ಪ್ರಧಾನಿ ಎಂಬ ಗರಿಮೆಗೆ ಮೋದಿ ಪಾತ್ರರಾಗುತ್ತಿದ್ದಾರೆ.

Facebook Comments

Sri Raghav

Admin