ಸರ್ಕಾರಿ ಶಾಲೆಯಲ್ಲಿ ಓದುವವರಿಗೆ ಮಾತ್ರ ಉಚಿತ ಬಸ್ ಪಾಸ್

ಈ ಸುದ್ದಿಯನ್ನು ಶೇರ್ ಮಾಡಿ
Kumaraswamy--01

ರಾಮನಗರ, ಜು 23 – ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುವುದು ಎಂದು ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ನನಗೂ ರಾಜಕೀಯ ಮಾಡಲು ಬರುತ್ತೆ. ಅಧಿಕಾರಿಗಳ ಸಭೆ ಕರೆದು ಬಡ ಮಕ್ಕಳಿಗೆ ಉಚಿತ ಬಸ್ ಪಾಸ್ ವಿತರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಹಾಗೆಯೇ  ಉತ್ತರ ಕರ್ನಾಟಕನ್ನ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ನಮಗೆ ಉತ್ತರ ಹಾಗೂ ದಕ್ಷಿಣ ಎಂಬ ಬೇದ ಭಾವ ವಿಲ್ಲ ಎಂದು ಮಹದಾಯಿ ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಿರುವ ಬಿಜೆಪಿ ನಾಯಕರಿಗೆ ಸಿಎಂ ಟಾಂಗ್ ನೀಡಿದರು.‌‌  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಸ್ವ ಕ್ಷೇತ್ರ ಚನ್ನಪಟ್ಟಣದಲ್ಲಿ ತೆಗೆದುಕೊಂಡ ತೀರ್ಮಾನ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿಗೆ ಶಾಸಕರಾಗಿ ಆಯ್ಕೆಯಾಗಿ ಸಿಎಂ ಆದ ಮೇಲೆ ಪ್ರಥಮ ಭಾರಿಗೆ ಬೇಟಿ ನೀಡಿದ್ದರು. ಮೊದಲಿಗೆ ಕ್ಷೇತ್ರಕ್ಕೆ ಆಮಿಸಿದ ಕುಮಾರಸ್ವಾಮಿ ಹಲಸಿನಮರದೊಡ್ಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು. ತದನಂತರ ಕ್ಷೇತ್ರದ ಜನರಿಗೆ ಅಭಿನಂದನೆ ಸಮಾರಂಭವನ್ನ ಹಮ್ಮಿಕೊಳ್ಳಲಾಗಿತ್ತು.

ಮುಖ್ಯಮಂತ್ರಿಗಳು ವೇಧಿಕೆಗೆ ಬರುತ್ತಿದ್ದಂತೆಯೇ ಸಮಾರಂಭಕ್ಕೆ ಚಾಲನೆ ನೀಡಿ, ಯಾವೊಬ್ಬಮುಖಂಡರಿಗೂ ಕೂಡ ಮಾತನಾಡಲು ಅವಕಾವನ್ನ ನೀಡದೇ ಸ್ವತಃ ಕುಮಾರಸ್ವಾಮಿರವರೇ ಜೆಡಿಎಸ್ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಲು ಶುರು ಮಾಡಿದರು. ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರಗಳು ನನಗೆ ಎರಡು ಕಣ್ಣುಗಳು ಇದ್ದ ಹಾಗೆ. ಈ ಕ್ಷೇತ್ರಗಳನ್ನು ಅವಳಿ ನಗರವನ್ನಾಗಿ ಮಾಡಲಾಗುವುದು. ಅಲ್ಲದೆ ಈ ವರ್ಷದೊಳಗೆ ಎರಡು ಕ್ಷೇತ್ರಗಳಿಗೆ 2 ಸಾವಿರ ಕೋಟಿ ರೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹಾಗೆಯೇ ರಾಮನಗರ -ಚನ್ನಪಟ್ಟಣ ಹೆದ್ದಾರಿ ಮಧ್ಯ 500 ಎಕರೆ ಪ್ರದೇಶದಲ್ಲಿ ರೇಷ್ಮೆ ಸೂಪರ್ ಮಾರುಕಟ್ಟೆ ಮಾಡಲಾಗುವುದು ಎಂದರು. ಹಾಗೆಯೇ ಉಚಿತ ಬಸ್ ಪಾಸ್ ವಿತರಣೆ ಬಗ್ಗೆ ಮಾತನಾಡಿದ ಸಿಎಂ, ನನಗೂ ರಾಜಕೀಯ ಮಾಡಲು ಬರುತ್ತೆ, ಲಕ್ಷಾಂತರ ರೂ ಡೋನೇಷನ್ ನೀಡಿ ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಉಚಿತ ಬಸ್ ಅಗತ್ಯವಿಲ್ಲ. ಸರ್ಕಾರಿ ಶಾಲೆಯಲ್ಲಿ ಓದುವ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಣೆ ಮಾಡಲಾಗುವುದು. ಈ ಕೂಡಲೆ ಅಧಿಕಾರಿಗಳ ಜೊತೆ ಚರ್ಚಿಸಿ ಬಡ ಮಕ್ಕಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಇನ್ನು ಮಹದಾಯಿ ಹೋರಾಟ ವಿಷಯಕ್ಕೆ ಸಂಬಂದಿಸಿದಂತೆ ವಿರೋಧ ಪಕ್ಷ ರಾಜಕೀಯ ಮಾಡಲು ಹೊರಟಿದೆ. ಉತ್ತರ ಕರ್ನಾಟಕ ವನ್ನ ಮರೆಯುವ ಪ್ರಶ್ನೆಯೇ ಇಲ್ಲ. ಜೆಡಿಎಸ್ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕಕ್ಕೆ ಜೆಡಿಎಸ್ ಕೊಡುಗೆ ಅಪಾರವಾಗಿದ್ದು, ಅಭಿವೃದ್ಧಿ ಮಾಡಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಸರಿಯಲ್ಲ. ನನಗೆ ದಕ್ಷಿಣ ಉತ್ತರ ಎಂದು ಭೇದ ಬಾವ ವಿಲ್ಲ ರಾಜ್ಯದ ಅಭಿವೃದ್ಧಿ ನನಗೆ ಮುಖ್ಯ ಎಂದು ಇದೇ ವೇಳೆ ಸಿಎಂ ಕುಮಾರಸ್ವಾಮಿ ತಿಳಿಸಿದರು. ಇದೇ ವೇಳೆ ಕಾರ್ಯಕರ್ತರು ಸಿಎಂ ಕುಮಾರಸ್ವಾಮಿಯವರನ್ನು ಅಭಿನಂದಿಸಿದರು. ಸಿಎಂ ಆಗಮನದಿಂದ ಚನ್ನಪಟ್ಟಣ ನಗರದಾದ್ಯಂತ ಹಾಗೂ ವೇದಿಕೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Facebook Comments

Sri Raghav

Admin