ಬೆಂಗಳೂರಲ್ಲೂ ಕಾಣಿಸಿಕೊಂಡ ‘ಫ್ರೀ ಕಾಶ್ಮೀರ’ ಗೋಡೆ ಬರಹಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.14- ದೆಹಲಿ, ಮುಂಬೈ, ರಾಜ್ಯದ ಮೈಸೂರು ನಂತರ ಈಗ ಬೆಂಗಳೂರಿನಲ್ಲೂ ಫ್ರೀ ಕಾಶ್ಮೀರ ಎಂಬ ಗೋಡೆ ಬರಹಗಳು ಕಾಣಿಸಿಕೊಂಡಿವೆ. ನಗರದ ಚರ್ಚ್‍ಸ್ಟ್ರೀಟ್‍ನ ಗೋಡೆಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ವಿರುದ್ಧ ಅವಹೇಳನಕಾರಿ ಬರಹಗಳು ಸೇರಿದಂತೆ ಎನ್‍ಆರ್‍ಸಿ, ಸಿಎಎ ಕಾಯ್ದೆರದ್ದುಪಡಿಸಬೇಕೆಂಬ ಬರಹಗಳು ಕಂಡುಬಂದಿವೆ.

ರಾತ್ರೋರಾತ್ರಿ ಕಿಡಿಗೇಡಿಗಳು ಪೈಂಟ್‍ನಲ್ಲಿ ಬರಹಗಳನ್ನು ಬರೆದಿದ್ದು, ಕಬ್ಬನ್‍ಪಾರ್ಕ್ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.

ಸ್ಥಳಕ್ಕೆ ಡಿಸಿಪಿ ಚೇತನ್‍ಸಿಂಗ್ ರಾಥೋಡ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಮೈಸೂರು ವಿವಿ ಆವರಣದಲ್ಲಿ ತಮಿಳುನಾಡು ಮೂಲದ ಯುವತಿ ಪೋಸ್ಟರ್ ಹಿಡಿದು ವಿವಾದ ಸೃಷ್ಟಿಯಾದ ಪ್ರಕರಣ ಮಾಸುವ ಮುನ್ನವೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗೋಡೆಗಳು ಹಾಗೂ ಅಂಗಡಿ-ಮಳಿಗೆಗಳ ಶೆಟರ್‍ಗಳ ಮೇಲೆ ವಿರೋಧಿ ಬರಹಗಳು ಕಂಡುಬಂದಿವೆ.

Facebook Comments

Sri Raghav

Admin