ಫ್ರೆಂಚ್ ಓಪನ್ : ಸಾತ್ವಿಕ್-ಚಿರಾಗ್ ಜೋಡಿಗೆ ಬೆಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ಪ್ಯಾರಿಸ್, ಅ.28- ಭಾರತ ಪುರುಷರ ವಿಭಾಗದ ಅಗ್ರ ಶ್ರೇಯಾಂಕಿತ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಫ್ರೆಂಚ್ ಓಪನ್ ಬಿಡಬ್ಲ್ಯೂಎಫ್ ಸೂಪರ್ 750 ಪಂದ್ಯಾವಳಿಯ ಡಬಲ್ಸ್ ಫೈನಲ್‍ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ನಿನ್ನೆ ಈ ಜೋಡಿ ಫೈನಲ್ ಪ್ರವೇಶಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತ್ತು. ಇಂದು ನಡೆದ ಫೈನಲ್‍ನಲ್ಲಿ ವಿಶ್ವದ ನಂ.1 ಜೋಡಿ ಮಾರ್ಕಸ್ ಗಿಡಿಯಾನ್ ಮತ್ತು ಕೆವಿನ್ ಸಂಜಯಾ ವಿರುದ್ಧ ಸೆಣಸಿ 18-21, 16-21 ಸೆಟ್‍ಗಳಿಂದ ಪರಾಭವಗೊಂಡು ರಜತ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.

ಆದಾಗ್ಯೂ ಈ ಜೋಡಿಯ ಫ್ರೆಂಚ್ ಓಪನ್ ಟೆನ್ನಿಸ್‍ನ ಸಾಧನೆ ಪ್ರಶಂಸೆಗೆ ಪಾತ್ರವಾಗಿದೆ.
ನಿನ್ನೆ ನಡೆದ ಸೆಮಿಫೈನಲ್‍ನಲ್ಲಿ ಜಪಾನ್‍ನ ಬಲಿಷ್ಠ ಜೋಡಿ ಮತ್ತು ವಿಶ್ವದ 6ನೇ ಕ್ರಮಾಂಕದ ಹಿರೊಯುಕಿ ಎಂಡೋ ಮತ್ತು ಯುಟಾ ವಟನಾಬೆ ಅವರನ್ನು 21-11, 25-23 ಸೆಟ್‍ಗಳಿಂದ ಸಾತ್ವಿಕ್ ಮತ್ತು ಚಿರಾಗ್ ಮಣಿಸಿ ಫೈನಲ್ ತಲುಪಿದ್ದರು.

ಇದೇ ಮೊದಲ ಬಾರಿಗೆ ಟೆನ್ನಿಸ್ ಇತಿಹಾಸದಲ್ಲೇ ಭಾರತೀಯ ಜೋಡಿ ಫೈನಲ್ ತಲುಪಿತ್ತು.

Facebook Comments

Sri Raghav

Admin