ಗರ್ಲ್‍ಫೆಂಡ್ ಜೊತೆಗಿದ್ದ ಫೋಟೋ ಕ್ಲಿಕಿಸಿ ಬ್ಲಾಕ್‍ಮೇಲ್ ಮಾಡಿದ ಸ್ನೇಹಿತನ ಕೊಲೆ ಮಾಡಿದ ಗೆಳೆಯರು

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೊ,ಅ.19- ಸ್ನೇಹಿತ ಮತ್ತು ಆತನ ಲವರ್ ಒಟ್ಟಿಗಿದ್ದ ಫೋಟೋವನ್ನು ಕ್ಲಿಕಿಸಿಕೊಂಡು ಹುಡುಗಿಯನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದ ಗೆಳೆಯನಿಗೆ ಮಾದಕ ಬೆರೆಸಿದ ಪಾನೀಯ ನೀಡಿ ಪ್ರಜ್ಞೆ ತಪ್ಪಿಸಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.  ಶೇಖ್ಪುರ ಗ್ರಾಮದ ನಿವಾಸಿ ಅಭಿಷೇಕ್ ಕುಮಾರ್(32) ಕೊಲೆಯಾದ ಸ್ನೇಹಿತ.

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನೆಹ್ತೌರ್ ಫೋಲೀಸ್ ಠಾಣೆ ವ್ಯಾಪ್ತಿಯ ತರ್ಕೋಲಿ ಗ್ರಾಮದ ಬಳಿ ಕಬ್ಬಿನ ಹೊಲದಲ್ಲಿ ಈತನನ್ನು ಕರೆಸಿಕೊಂಡು ಕೊಲೆ ಮಾಡಲಾಗಿದೆ. ಈ ಸಂಬಂಧ ಮೃತನ ತಂದೆ ರತನ್ ಸಿಂಗ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಹಂಡಾಬಾದ್ ಗ್ರಾಮದ ನಿವಾಸಿ ದೀಪಕ್ ಸೈನಿ ಮತ್ತು ಆತನ ಸ್ನೇಹಿತ ಅಂಕಿತ್‍ಕುಮಾರ್‍ನನ್ನು ಬಂಧಿಸಿದ್ದಾರೆ.

ದೀಪಕ್ ತಾನು ಪ್ರೀತಿಸುತ್ತಿದ್ದ ಹುಡುಗಿಯ ಜೊತೆಯಿದ್ದ ಫೋಟೋಗಳನ್ನು ಅಭಿಷೇಕ್ ಕ್ಲಿಕಿಸಿಕೊಂಡು ಆ ಹುಡುಗಿಗೆ ಬ್ಲಾಕ್ ಮಾಡಿ ಒಬ್ಬಂಟಿಯಾಗಿ ಭೇಟಿಯಾಗುವಂತೆ ಸೂಚಿಸಿದ್ದ. ಈ ಬಗ್ಗೆ ತಿಳಿದ ದೀಪಕ್ ಅವನನ್ನು ಮುಗಿಸಲು ನಿರ್ಧರಿಸಿದ್ದು, ಇದಕ್ಕಾಗಿ ಮತ್ತೊಬ್ಬ ಸ್ನೇಹಿತ ಅಂಕಿತ್‍ಕುಮಾರ್‍ನ ನೆರವು ಪಡೆದುಕೊಂಡಿದ್ದಾನೆ.

ಪೂರ್ವ ನಿಗಧಿಯಂತೆ ಅಭಿಷೇಕನನ್ನು ಹೊಲಕ್ಕೆ ಕರೆತಂದು ಮತ್ತುಬರುವ ಔಷಧಿಯನ್ನು ತಂಪುಪಾನೀಯದಲ್ಲಿ ಬೆರೆಸಿ ಕುಡಿಸಿದ್ದಾರೆ. ಅಭಿಷೇಕ್ ಪ್ರಜ್ಞೆ ತಪ್ಪಿದ ನಂತರ ಆತನ ಕತ್ತು ಹಿಸುಕಿ ಬಾಯಿಗೆ ಮಣ್ಣು ತುಂಬಿ ಕೊಲೆ ಮಾಡಿದ್ದಾರೆ.

ದೀಪಕ್ ಮತ್ತು ಅಂಕಿತ್‍ಕುಮಾರ್‍ನನ್ನು ಬಂಧಿಸಲಾಗಿದ್ದು, ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಬಿಜ್ನೋರ್ ಪೆÇಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಧರ್ಮವೀರ್ ಸಿಂಗ್ ಹೇಳಿದ್ದಾರೆ.

Facebook Comments