ಸತತ ಐದು ದಿನಗಳಿಂದ ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ದರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.25- ಕಳೆದ ಐದು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರುತ್ತಲೇ ಇದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.  ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ಪೆಟ್ರೋಲ್ ಮೇಲೆ 6 ಪೈಸೆ ಹಾಗೂ ಡಿಸೇಲ್ ಮೇಲೆ 17 ಪೈಸೆ ಏರಿಕೆಯಾಗುವ ಮೂಲಕ ಲೀಟರ್ ಪೆಟ್ರೋಲ್‍ಗೆ 84.31 ರೂ. ಹಾಗೂ ಡೀಸೆಲ್‍ಗೆ 75.70 ರೂ.ಗಳನ್ನು ತೆರಬೇಕಾಗಿದೆ.

ದೇಶದ ರಾಜಧಾನಿ ನವದೆಹಲಿ ಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 81.59 ರೂ. ಇದ್ದರೆ ಡೀಸೆಲ್‍ಗೆ 71.41 ರೂ. ತೆರಬೇಕಾಗಿದೆ. ಚೆನ್ನೈನಲ್ಲಿ ಡೀಸೆಲ್ ಬೆಲೆ 76.88, ಕೋಲ್ಕತ್ತಾದಲ್ಲಿ 74.98, ಮುಂಬೈನಲ್ಲಿ 77.90 ರೂ. ಇದೆ. ಇನ್ನೂ ಪೆಟ್ರೋಲ್ ದರವು ಏರಿಕೆಯಾಗಿದ್ದು ಚೆನ್ನೈನಲ್ಲಿ 84.64, ಕೋಲ್ಕತ್ತಾದಲ್ಲಿ 83.15, ಮುಂಬೈನಲ್ಲಿ 88.29 ರೂ. ಇದೆ.

Facebook Comments