ಮತ್ತೆ ತೈಲ ದರ ಹೆಚ್ಚಳ, 1 ಲೀ. ಪೆಟ್ರೋಲ್ ಗೆ 92.28 ರೂ. ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.23-ವಾರದಲ್ಲಿ ನಾಲ್ಕನೆ ಬಾರಿಗೆ ಇಂಧನ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರಿಗೆ 25 ಪೈಸೆ ಹೆಚ್ಚಳವಾಗಿದ್ದು, ಇದೊಂದು ದಾಖಲೆ ಬೆಲೆ ಏರಿಕೆ ಎಂದೇ ಭಾವಿಸಲಾಗುತ್ತಿದೆ. ಇಂಧನ ಬೆಲೆ ಏರಿಕೆಯೊಂದಿಗೆ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 85.70 ರೂ.ಗೆ ಏರಿಕೆಯಾಗಿದ್ದರೆ, ಮುಂಬೈನಲ್ಲಿ 92.28 ರೂ.ಗಳಿಗೆ ಹೆಚ್ಚಳಗೊಂಡಿದೆ.

ಡೀಸೆಲ್ ಬೆಲೆ ದೆಹಲಿಯಲ್ಲಿ 75.88 ಇದ್ದರೆ, ಮುಂಬೈನಲ್ಲಿ 82.66 ರೂ.ಗಳಾಗಿದೆ. ಕಳೆದ ಒಂದು ವಾರದಿಂದೀಚೆಗೆ ಸತತವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಒಂದು ಲೀಟರ್‍ಗೆ ಒಂದು ರೂ.ಹೆಚ್ಚಳಗೊಂಡಿರುವುದರಿಂದ ಇದೊಂದು ದಾಖಲೆಯಾಗಿದೆ.

ಆಯಾ ರಾಜ್ಯಗಳಲ್ಲಿ ವಿಭಿನ್ನ ಸೇಲ್ಸ್ ಟ್ಯಾಕ್ಸ್ ಇರುವುದರಿಂದ ಇಂಧನ ಬೆಲೆ ಏರಿಕೆಯಲ್ಲೂ ಪ್ರತ್ಯೇಕ ದರ ನಿಗದಿಯಾಗಿರುವುದರಿಂದ ಆಯಾ ರಾಜ್ಯಗಳ ತೆರಿಗೆ ಆಧಾರದ ಮೇಲೆ ಇಂಧನ ಬೆಲೆ ಏರಿಕೆಯಾಗಲಿದೆ.

Facebook Comments