ಮೈಸೂರು ಮೃಗಾಲಯ ನಿರ್ವಹಣೆಗೆ ಹರಿದುಬಂದ ನೆರವಿನ ಮಹಾಪೂರ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಮೇ 7- ಇಲ್ಲಿನ ಜಯಚಾಮರಾಜೇಂದ್ರ ಮೃಗಾಲಯದ ನಿರ್ವಹಣೆಗೆ ನೆರವಿನ ಮಹಾಪೂರ ಹರಿದುಬರುತ್ತಿದೆ 1.5 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ.

ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಮನವಿ ಮೇರೆಗೆ ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ್ ಅವರು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ವತಿಯಿಂದ 84 ಲಕ್ಷ ರೂ.ಗಳ ಚೆಕ್‍ನ್ನು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರಿಗೆ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಸೋಮಶೇಖರ್ ಅವರು 3ನೇ ಹಂತವಾಗಿ 21.14 ಲಕ್ಷ ರೂ. ಚೆಕ್‍ನ್ನು ಅಧಿಕಾರಿಗಳಿಗೆ ನೀಡಿದರು. ಒಂದೇ ದಿನ ಮೃಗಾಲಯಕ್ಕೆ 1.05 ಕೋಟಿ ದೇಣಿಗೆ ಸೇರಿ ಒಟ್ಟಾರೆ 2.32 ಕೋಟಿ ದೇಣಿಗೆ ನೀಡಿದಂತಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಗೋಪಾಲಯ್ಯ ಸೇರಿದಂತೆ ಮತ್ತಿತರರು ಸೋಮಶೇಖರ್ ಅವರ ಮನವಿ ಮೇರೆಗೆ ಮೃಗಾಲಯದ ನಿರ್ವಹಣೆಗೆ ನೆರವು ನೀಡಿದ್ದರು. ವಿದೇಶಗಳಿಂದಲೂ ಹಲವರು ನೆರವು ನೀಡಿದ್ದಾರೆ.

ಸಚಿವರು ಅಮೆರಿಕದ ಅಕ್ಕ ಸದಸ್ಯರಿಗೂ ನೆರವಿಗೆ ಮನವಿ ಮಾಡಿದ್ದಾರಲ್ಲದೆ ಇನ್ಫೋಸಿಸ್ ಫೌಂಡೇಷನ್‍ನ ಸುಧಾನಾರಾಯಣಮೂರ್ತಿ ಅವರು ಸಹಕಾರ ನೀಡಬೇಕೆಂದು ಮನವಿ ಸಲ್ಲಿಸಿದ್ದು, ಲಾಕ್‍ಡೌನ್ ಸಂಕಷ್ಟದ ಸಂದರ್ಭದಲ್ಲೂ ಉತ್ತಮ ನಿರ್ವಹಣೆ ಮಾಡುತ್ತಿದ್ದ ಮೃಗಾಲಯವನ್ನು ಮತ್ತಷ್ಟು ಪ್ರಸಿದ್ದಿಗೊಳಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಮುಂದಾಗಿರುವ ಪ್ರಯತ್ನಕ್ಕೆ ಎಲ್ಲರೂ ಸಹಕಾರ ನೀಡುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.

Facebook Comments

Sri Raghav

Admin