ಭವಿಷ್ಯದ ಆಹಾರಗಳೇನು ಗೊತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

ಜೆಟ್ ವೇಗದ ಈ ಯುಗದಲ್ಲಿ ಹೊಸ ಹೊಸ ಸಂಶೋಧನೆಗಳ ಜೊತೆ ಜೊತೆಗೆ ಆರೋಗ್ಯಕರ ಆಹಾರ ಸೃಷ್ಟಿಯೂ ಪ್ರಮುಖ ಸ್ಥಾನ ಪಡೆದಿದೆ. ಜನರ ಆರೋಗ್ಯ ಸುಧಾರಿಸಲು ಡೆನ್ಮಾಕ್‍ನಲ್ಲಿ ಭವಿಷ್ಯದ ಆಹಾರ ಅಭಿವೃದ್ದಿಗೊಳಿಸಲಾಗಿದೆ. ಇಷ್ಟಕ್ಕೂ ಈ ಫ್ಯೂಚರ್ ಫುಡ್‍ನನ್ನು ಯಾವುದರಿಂದ ತಯಾರಿಸಲಾಗುತ್ತದೆ ಗೊತ್ತಾ..?

ಡೆನ್ಮಾರ್ಕ್ ರಾಜಧಾನಿ ಕೋಪೆನ್‍ಹಗೇನ್‍ನ ಸ್ಪೇಸ್-10 ಎಂಬ ಮಳಿಗೆಯ ವಿಶೇಷ ಪರಿಣಿತರು ನವೀನ ಪರಿಕಲ್ಪನೆಯ ಆಹಾರವನ್ನು ಸಂಶೋಧನೆ ಮಾಡಿದ್ದಾರೆ ಕೀಟಗಳು ಮತ್ತು ಪಾಚಿಗಳಿಂದ ತಯಾರಿಸಿದ ಈ ಸ್ವಾದಿಷ್ಟ ಖಾದ್ಯಗಳು ಜನರ ಆರೋಗ್ಯವನ್ನು ಸುಧಾರಿಸಿ ಅವರ ಜೀವನಮಟ್ವವನ್ನು ಹೆಚ್ಚಿಸಲು ನೆರವಾಗುತ್ತಿದೆ.

ಫುಡ್ ಇನೋವೇಷನ್ ಕೂಕ್‍ಬುಕ್‍ನಿಂದ ಈ ಹೊಸ ಖಾದ್ಯಗಳ ಉತ್ಪನ್ನಗಳನ್ನು ಅಭಿವೃದ್ದಿಗೊಳಿಸಲಾಗಿದ್ದು. ಇದಕ್ಕೆ ಫ್ಯೂಚರ್ ಫುಡ್ ಟುಡೆ ಎಂದು ಹೆಸರಿಡ ಲಾಗಿದೆ. ಜನರಿಗೆ ಹೊಸ ಬಗೆಯ ಆಹಾರದ ಮೂಲಕ ಶಕ್ತಿ ಸಂಚಯವಾಗುವಂತೆ ಮಾಡಿ ಅವರ ಜೀವನ ಮಟ್ಟ ಸುಧಾರಿಸುವುದು ಇದರ ಉದ್ದೇಶ. ಕೀಟಗಳು ಮತ್ತು ಪಾಚಿಗಳಿಂದ ತಯಾರಿಸಿದ ಪೌಷ್ಠಿಕಾಂಶಗಳ ಆಕರ್ಷಕ ಆಹಾರವಿದು. ಇದಕ್ಕಾಗಿ ರೆಸಿಪಿ ಬುಕ್‍ನನ್ನು ಸಹ ರೂಪಿಸಲಾಗಿದೆ. ಡಾಗ್‍ಲೆಸ್ ಹಾಟ್‍ದಾಗ್ ಎಂಬ ಖಾದ್ಯ ವಿಶೇಷ ಗಮನಸೆಳೆಯುತ್ತದೆ. ಸ್ಪುರುಲಿನಾ ಎಂಬ ವಿಶಿಷ್ಟ ಬಗೆಯ ಪಾಚಿ ಬಳಸಿ ತಯಾರಿಸಿದ ಬನ್ ಇದು. ಇದು ವಿಟಮಿನ್, ಖನಿಜಗಳು ಮತ್ತು ಪ್ರೊಟೀನ್‍ಗಳೊಂದಿಗೆ ಸಮೃದ್ದವಾಗಿದೆ.

ಮತ್ತೊಂದು ಆಕರ್ಷಕ ಖ್ಯಾದ ಹೆಸರು ಬರ್ಗರ್ ಬಗ್ ಬನ್. ಇದು ಬೀಟ್‍ರೂಟ್, ಆಲೂಗಡ್ಡೆ, ಗಡ್ಡೆ ಸಸ್ಯ ಹಾಗೂ ಮೀಲ್‍ವರ್ಮ್ ಎಂಬ ಜೀರುಂಡೆ ಮರಿಹುಳಗಳ ಡಿಶ್.. 50 ಗ್ರಾಂ ಕೀಟ ಬಳಸಿ ಈ ಆಹಾರವನ್ನು ತಯಾರಿಸಲಾಗುತ್ತದೆ. ಅಲ್ಲದೇ ಕೀಟಗಳಿಂದ ಮಾಡಿದ ಚಿಪ್ಸ್, ಹುಳುಗಳಿಂದ ತಯಾರಿಸಿದ ಸ್ಟಿಕ್‍ಗಳೂ ಸಹ ರುಚಿಕರ. ಗ್ರಾಸ್‍ಹೂಪರ್ ಮತ್ತು ಮೀಲ್‍ವರ್ಮ್‍ಗಳನ್ನು ಒಣಗಿಸಿ ಇವುಗಳನ್ನು ಸಿದ್ದಪಡಿಸಲಾಗುತ್ತದೆ.

ಸ್ಪೇಸ್ 10 ಮಳಿಗೆಯನ್ನು ಆರಂಭದಲ್ಲಿ ಕೊಪೆನ್‍ಹಗೇನ್‍ನಲ್ಲಿ ಜನಪ್ರಿಯಗೊಳಿಸಿ ನಂತರ ಡೆನಾರ್ಕ್‍ನಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪ್ರಯೋಗಾಲಯಗಳು, ವಿಶೇಷ ಪಾಕಶಾಲೆ. ಪ್ರದರ್ಶನ ಕೇಂದ್ರ ಮತ್ತು ಕೀಟ-ಪಾಚಿ ಅಭಿವೃದ್ದಿಗೊಳಿಸುವ ತೋಟಗಳನ್ನು ಸಹ ನಿರ್ಮಿಸಲಾಗಿದೆ.

Facebook Comments