ರಾಜ್ಯದಲ್ಲಿ ಮಳೆ ಹಾನಿಗೆ ಶೀಘ್ರದಲ್ಲೇ ವಿಶೇಷ ಅನುದಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23-ದೇಶದ ವಿವಿಧೆಡೆಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಆಗಿರುವ ಹಾನಿಯ ಬಗ್ಗೆ ಎಲ್ಲಾ ರಾಜ್ಯಗಳಿಂದ ಮಾಹಿತಿ ಪಡೆಯುತ್ತಿದ್ದೇವೆ. ಕೇಂದ್ರದಿಂದ ಅತಿ ಶೀಘ್ರದಲ್ಲಿಯೇ ಅನುದಾನದ ಮರು ಪಾವತಿ ಜತೆಗೆ ವಿಶೇಷ ಅನುದಾನ ಬಿಡುಗಡೆಯಾಗಲಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶಾನ್ ರೆಡ್ಡಿ ಇಂದಿಲ್ಲಿ ತಿಳಿಸಿದರು.

ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಈ ರಾಜ್ಯಗಳಲ್ಲಿ ರಾಜ್ಯದಲ್ಲಿರುವ ನಿಧಿ ಬಳಕೆ ಯಾಗುತ್ತಿದೆ. ಅತಿ ಶೀಘ್ರದಲ್ಲಿ ಕೇಂದ್ರದ ಅನುದಾನ ಒದಗಿಸಲಾ ಗುವುದು ಎಂದರು.ಜಮ್ಮು -ಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶದಲ್ಲಿ ಅ.31ರಿಂದ ಭಾರತೀಯ ಸಂವಿಧಾನದನ್ವಯ ಆಡಳಿತ ಜಾರಿಯಾಗಲಿದೆ ಎಂದು ವಿವರಿಸಿದರು. ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು -ಕಾಶ್ಮೀರ ಮತ್ತು ಲಡಾಕ್‍ನಲ್ಲಿ ಈಗಾಗಲೇ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಸದ್ಯದಲ್ಲೇ ಭಾರತೀಯ ಸಂವಿಧಾನದಂತೆ ಆಡಳಿತ ನಡೆಸಲಾಗುವುದು.

ಈಗಾಗಲೇ ಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷರಿಗೆ ಕಾನೂನು ಅನುಷ್ಠಾನ ಸೇರಿದಂತೆ ಆಡಳಿತ ಸಂಬಂಧಿ ಕೇಂದ್ರ ಸರ್ಕಾರದಿಂದಲೇ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಎರಡೂ ಕಡೆಗಳಿಗೆ ಶೀಘ್ರದಲ್ಲಿ ಲೆಫ್ಟಿನೆಂಟ್ ಗೌರ್ನರ್ ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮೆರಿಟ್ ಆಧರಿಸಿ ಗ್ರಾಮ ಪಂಚಾಯ್ತಿಗಳಲ್ಲಿ ಸರ್ಕಾರಿ ಉದ್ಯೋಗ ನೀಡುವ ಕಾರ್ಯ ನಡೆಯಲಿದೆ. ಸೇನೆ, ಸಿಆರ್‍ಪಿಎಫ್, ಬಿಎಸ್‍ಎಫ್‍ನಲ್ಲೂ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಸೇಬು ಬೆಳೆಗಾರರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಶೇ.100ರಷ್ಟು ಲಾಭ ಒದಗಿಸುವ ಉದ್ದೇಶ ಸರ್ಕಾರಕ್ಕಿದೆ. ಹಾಗಾಗಿ ಸರ್ಕಾರಿ ವ್ಯವಸ್ಥೆಯಡಿಯೇ ಮಾರುಕಟ್ಟೆ ವ್ಯವಸ್ಥೆಯನ್ನು ನಿರ್ಮಿಸಲಾಗುವುದು ಎಂದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಎಷ್ಟು ದೇವಸ್ಥಾನ ಹಾಗೂ ಶಾಲೆಗಳು ಸುಸಜ್ಜಿತವಾಗಿವೆ. ಎಷ್ಟು ನಾಶವಾಗಿವೆ ಎಂಬುದನ್ನು ಸರ್ವೆ ಮೂಲಕ ತಿಳಿದು ಅವುಗಳನ್ನು ಸುಸಜ್ಜಿತಗೊಳಿಸಲು ಕ್ರಮ ವಹಿಸಲಿದ್ದೇವೆ. ಇದೇ ಮಾದರಿಯಲ್ಲಿ ಸಿನಿಮಾ ಮಂದಿರಗಳ ಸರ್ವೆಯೂ ನಡೆಯಲಿದೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಎಂಎಲ್‍ಸಿ ನಾರಾಯಣ ಸ್ವಾಮಿ ಹಾಗೂ ಅರವಿಂದ ಬೆಲ್ಲದ್, ವಕ್ತಾರ ಡಾ.ವಾಮನಾಚಾರ್ಯ ಮತ್ತಿತರರು ಇದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ