ರಾಜ್ಯಕ್ಕೆ ಬಿಜೆಪಿ ಪಕ್ಷದ ಕೊಡುಗೆ ಏನಿದೆ..? : ಪರಮೇಶ್ವರ್ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ತುರುವೇಕೆರೆ, ಡಿ.4- ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಪಕ್ಷದ ಕೊಡುಗೆ ಏನಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಪ್ರಶ್ನಿಸಿದರು.
ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನಲೆ ತಾಲೂಕು ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಶೇ 40ರಷ್ಟು ಸರ್ಕಾರ ಎಂದು ರಾಜ್ಯದ ಗುತ್ತಿಗೆದಾರರು ದೇಶದ ಪ್ರದಾನಿಗೆ ಪತ್ರಬರೆದಿದ್ದಾರೆ. ಪ್ರದಾನಿ ನರೆಂದ್ರ ಮೋದಿಯವರು ನಮ್ಮ ಸರ್ಕಾರವನ್ನು ಶೇ 10 ಸರ್ಕಾರ ಎಂದು ಹೇಳಿದ್ದರು ಈಗ ರಾಜ್ಯದ ಜನರಿಗೆ ಪ್ರಧಾನಿಯವರು ಏನು ಉತ್ತರ ನೀಡುತ್ತಾರೆ ಎಂದರು.

ಕೇಂದ್ರ ಮಾಜಿ ಸಚಿವ ಮುನಿಯಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಕಾರದಲ್ಲಿ ಸಿದ್ದರಾಮಯ್ಯ ಉತ್ತಮ ಕೆಲಸ ಮಾಡಿದ್ದಾರೆ. ಎಸ್‍ಸಿ, ಎಸ್‍ಟಿ ನಿಗಮಗಳಿಗೆ ಕೋಟಿ ಅನುದಾನ ನೀಡಿದ್ದರು ಈ ಸರ್ಕಾರದಲ್ಲಿ ಅನುದಾನ ಕೊರತೆಯಾಗಿದೆ ಎಂದರು.

ಅಭ್ಯರ್ಥಿ ರಾಜೇಂದ್ರ ರಾಜಣ್ಣ ಮಾತನಾಡಿ. ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕೋರಿದರು. ಬೆಮೆಲ್ ಕಾಂತರಾಜು ಕಚೇರಿಗೆ ಭೇಟಿ: ಪಟ್ಟಣಕ್ಕೆ ಆಗಮಿಸಿದ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಸಂಸದರಾದ ಮುನಿಯಪ್ಪ, ಮುದ್ದಹನುಮೇಗೌಡ, ಮಾಜಿ ಜಿಲ್ಲಾಧ್ಯಕ್ಷ ಷಪಿ ಅಹಮದ್, ಅಭ್ಯರ್ಥಿ ರಾಜೇಂದ್ರ ಕಾಂಗ್ರೇಸ್ ಸಭೆಗೂ ಮುನ್ನಾ ಪಟ್ಟಣದಲ್ಲಿರುವ ವಿದಾನ ಪರಿಷತ್ ಸದಸ್ಯ ಬೆಮೆಲ್ ಕಾಮತರಾಜು ಕಚೇರಿಗೆ ಭೇಟಿ ನೀಡಿದರು.

ಮಾಜಿ ಶಾಸಕರಾದ ಟಿ.ಬಿ.ಜಯಚಂದ್ರ, ಷಡಕ್ಷರಿ, ಲಕ್ಕಪ್ಪ, ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಜಿಲ್ಲಾಧ್ಯಕ್ಷ ಷಪಿಅಹಮದ್, ಮುಖಂಡರಾದ ಗೀತಾರಾಜಣ್ಣ, ಚೌದ್ರಿರಂಗಪ್ಪ, ವಸಂತಕುಮಾರ್, ಸುಬ್ರಮಣಿ ಶ್ರೀಕಂಠೇಗೌಡ, ಪ್ರಸನ್ನಕುಮಾರ್, ನಾಗೇಶ್, ನಂಜುಂಡಪ್ಪ, ಎಂ.ಡಿ.ಮೂರ್ತಿ, ವೇಣುಗೋಪಾಲ್ ಹಾಗೂ ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮುಖಂಡರು ಇದ್ದರು.

Facebook Comments