3 ಸಾರಿ ನಾನು ಸಿಎಂ ಆಗೋ ಚಾನ್ಸ್ ಮಿಸ್ ಆಯ್ತು : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

ಕೊರಟಗೆರೆ, ಆ.19- ರಾಜ್ಯದ ಜನರ ಸೇವೆ ಮಾಡಲು ನನಗೆ ಮೂರು ಸಲ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೂ ಸಿಎಂ ಆಗಲಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ದೊಂಬರಾಟದ ನಡುವೆ ನನಗೆ ಅವಕಾಶ ಕೆತಪ್ಪಿದೆ.  ಕೆಲವರು ನಾನು ಮುಖ್ಯಮಂತ್ರಿಯಾಗುವುದನ್ನು ಸಹಿಸಲು ಆಗದೆ ಷಡ್ಯಂತ್ರಗಳನ್ನು ರೂಪಿಸಿದರು ಜಾತಿಯ ಬಲದಲ್ಲಿ ಅವರ ಕೈ ಮೇಲಾಯಿತು.

ನಾವು ಕೆಳಗಾದೆವು ಎಂದು ಬೇಸರ ವ್ಯಕ್ತಪಡಿಸಿದರು. ತುಮಕೂರು, ಚಿತ್ರದುರ್ಗ, ಕೋಲಾರ ಸೇರಿದಂತೆ ಇತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ತರಲು ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಇದಲ್ಲದೇ ನಿರುದ್ಯೊಗ ಸಮಸ್ಯೆಗೆ ಸಾಕಷ್ಟು ಕೈಗಾರಿಕೆಗಳನ್ನು ತರಲು ಸಾಕಷ್ಟು ಚಿಂತನೆ ನಡೆಸಿದ್ದಲ್ಲದೆ ಚೀನಾ ಸೇರಿದಂತೆ ಇತರ ದೇಶಗಳ ಕೈಗಾರಿಕಾ ಸಂಪಾದಕರುಗಳ ಜೊತೆ ಮಾತುಕತೆ ನಡೆಸಿದ್ದೇನೆ ಎಂದರು.

ಕಸದಿಂದ ವಿದ್ಯುತ್ ತಯಾರಿಸಿ ರೈತರಿಗೆ ನೀಡುವ ಚಿಂತನೆಯನ್ನು ಕೂಡ ನಡೆಸಿದ್ದೆ ಆದರೆ ಅಷ್ಟರಲ್ಲಿ ದೋಸ್ತಿ ಸರ್ಕಾರ ಬಿದ್ದು ಹೋಯಿತು. ಮುಖ್ಯವಾಗಿ ಈಗ ನೆಲಮಂಗಲದ ಸಮೀಪವಿರುವ ಮೆಟ್ರೊ ಯೋಜನೆಯನ್ನು ತುಮಕೂರಿಗೆ ತರಲು ಬೃಹತ್ ಯೋಜನೆಯನ್ನು ರೂಪಿಸಿದ್ದೆ. ಇದರಿಂದ ಸಾಕಷ್ಟು ಉದ್ಯೋಗ ದೊರಕಲಿದ್ದು, ಅದಲ್ಲದೆ ಜನರ ಪ್ರಯಾಣಕ್ಕೆ ಪ್ರಯಾಣಕ್ಕೆ ಸಾಕಷ್ಟು ಅನುಕೂಲವಾಗುತ್ತಿತ್ತು ಎಂದು ತಿಳಿಸಿದರು.

Facebook Comments