ಸಿದ್ದರಾಮಯ್ಯಗೆ ಜಿಟಿಡಿ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.4- ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಸಚಿವ ಜಿ.ಟಿ.ದೇವೇಗೌಡ ಟಾಂಗ್ ನೀಡಿ ಬಿಜೆಪಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮೋದಿ , ಅಮಿತ್ ಶಾ ಆಪರೇಷನ್ ಕಮಲ ಮಾಡುತ್ತಿರುವುದಕ್ಕೆ ಅವರ ಬಳಿ ಮಾಹಿತಿ ಇರಬಹುದು. ಅವರನ್ನೇ ಕೇಳಿ ಎಂದರು. ಮೋದಿ ಈ ಹಿಂದೆ ಹೇಳಿದ್ದರು. ನಾವು ಆಪರೇಷನ್ ಕಮಲ ಮಾಡಲ್ಲ ಎಂದು ಅದಕ್ಕೆ ನಾನು ಆ ರೀತಿ ಹೇಳಿದ್ದೇನೆ.

ಬಿಜೆಪಿಯಿಂದ ನನಗೆ 50 ಕೋಟಿ ರೂ. ಆಫರ್ ಬಂದಿತ್ತು ಎಂಬ ಪಿರಿಯಾಪಟ್ಟಣ ಶಾಸಕ ಮಹದೇವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿಟಿಡಿ ಈ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಯಾರೇ ಆಗಲಿ ಈ ರೀತಿ ಮಾತನಾಡಬಾರದು. ಈ ಬಗ್ಗೆ ಮಹದೇವ್ ಅವರನ್ನೇ ಕೇಳಿ ಎಂದು ತಿಳಿಸಿದರು.

ಮೈಸೂರು ಏರ್‍ಪೆಫೋರ್ಟ್ ರನ್ ವೇ ನಿರ್ಮಾಣಕ್ಕೆ ಇದ್ದ ತೊಂದರೆ ನಿವಾರಣೆಯಾಗಿದೆ ಎಂದು ತಿಳಿಸಿದರು. ರನ್ ವೇ ನಿರ್ಮಾಣಕ್ಕೆ ಪ್ರಕಾಶ್ ಎಂಬುವರು ಜಮೀನು ನೀಡಲು ಒಪ್ಪಿರಲಿಲ್ಲ. ಆದರೆ ಈಗ ಅವರು ಜಮೀನು ನೀಡಲು ಒಪ್ಪಿದ್ದಾರೆ. ರನ್ ನಿರ್ಮಾಣಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ ಎಂದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ