ಕೊರೊನಾ ವಿರುದ್ಧ ಒಗ್ಗೂಡಿ ಹೋರಾಡಲು ಜಿ-20 ರಾಷ್ಟ್ರಗಳ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ನ.22- ವಿಶ್ವದಾದ್ಯಂತ 1.38 ಕೋಟಿ ಜನರನ್ನು ಬಲಿ ಪಡೆದಿರುವ ಕಿಲ್ಲರ್ ಕೊರೊನಾ ವೈರಸ್ ವಿರುದ್ಧ ಒಗ್ಗೂಡಿ ಹೋರಾಡುವ ಘೋಷಣೆಯೊಂದಿಗೆ ಜಿ-20 ಶೃಂಗಸಭೆ ವಿಧ್ಯುಕ್ತವಾಗಿ ಆರಂಭವಾಗಿದೆ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲಾ ಜಿ-20 ರಾಷ್ಟ್ರಗಳು ಲೋಕ ಕಂಟಕ ಕೋವಿಡ್ ವಿರುದ್ಧ ಸಮರ್ಥ ಹೋರಾಟ ನಡೆಸಿ ಪಿಡುಗನ್ನು ನಿರ್ಮೂಲನೆ ಮಾಡಲು ವಿಶ್ವ ನಾಯಕರು ನಿರ್ಧರಿಸಿದ್ದಾರೆ.

ಅರ್ಜೆಂಟೈನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ , ಇಂಡಿಯಾ , ಇಂಡೋನೇಷಿಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಟರ್ಕಿ, ಅಮೆರಿಕಾ, ಇಂಗ್ಲೆಂಡ್ ಮತ್ತು ಐರೋಪ್ಯ ಒಕ್ಕೂಟಗಳ ಮುಖ್ಯಸ್ಥರು ಕೊರೊನಾ ವಿರುದ್ಧ ಸಂಘಟಿತ ಹೋರಾಟ ನಡೆಸಲು ಪರಸ್ಪರ ಕೈ ಜೋಡಿಸುವ ಘೋಷಣೆಯನ್ನು ಹೊರಡಿಸಿದ್ದಾರೆ.

ಜಿ-20 ಶೃಂಗಸಭೆಯಲ್ಲಿ ಪ್ರಾಸ್ತಾವಿಕ ಬಾಷಣ ಮಾಡಿದ ಅತಿಥೇಯ ದೇಶ ಸೌದಿ ಅರೇಬಿಯಾದ ದೊರೆ ಕಿಂಗ್ ಸಲ್ಮಾನ್ ಈ ಹೋರಾಟದಲ್ಲಿ ಜಿ-20 ದೇಶಗಳಿಗೆ ಅಗತ್ಯವಾದ ಎಲ್ಲಾ ನೆರವು ಮತ್ತು ಸಹಕಾರ ನೀಡುವುದಾಗಿ ಘೋಷಿಸಿದರು.

ಈ ಪಿಡುಗು ನಿವಾರಣೆಗಾಗಿ ಲಸಿಕೆ ಅಭಿವೃದ್ಧಿ ಮತ್ತು ನಿಯಂತ್ರಣ ಕಾರ್ಯಕ್ರಮಗಳಿಗಾಗಿ ಜಿ-20 ಶೃಂಗಸಭೆಯಲ್ಲಿ ಕೋಟ್ಯಂತರ ಡಾಲರ್‍ಗಳ ನೆರವು ಪ್ರಕಟಿಸಲಾಗಿದೆ.

Facebook Comments