ಮೈದುಂಬಿ ಧುಮ್ಮಿಕ್ಕುತ್ತಿದೆ ಗಗನಚುಕ್ಕಿ ಜಲಪಾತ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಆ.8- ವಿಶ್ವ ವಿಖ್ಯಾತ ನಯಾಗರ ಫಾಲ್ಸ್ ನೆನಪಿಸುವ ತಾಲ್ಲೂಕಿನ ಪ್ರಸಿದ್ಧ ಶಿವನಸಮುದ್ರದ (ಬ್ಲಫ್) ಗಗನಚುಕ್ಕಿ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿರುವ ದೃಶ್ಯ ಮನಸೂರೆಗೊಳ್ಳುತ್ತಿದೆ.

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದ ಸುಮಾರು 50 ಸಾವಿರಕ್ಕೂ ಅಕ ಪ್ರಮಾಣದ ನೀರುನ್ನು ನದಿಗೆ ಬಿಟ್ಟಿರುವುದು ಮತ್ತು ಕೊಡಗೂ ಹಾಗೂ ಕಾವೇರಿ ಕಣಿವೆ ಭಾಗಗಳಲ್ಲಿ ಬಾರಿ ಮಳೆಯಾಗುತ್ತಿರುವುದರಿಂದ ಕೆ ಆರ್ ಎಸ್ ಜಲಾಶಯ ಭರ್ತಿಯಾಗುತ್ತಿದ್ದು ಇದರಿಂದ 30ಸಾವಿರ ಕ್ಯೂಸೆಕ್ ನೀರುನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ಶಿವನಸಮುದ್ರಕ್ಕೆ ಹೆಚ್ಚು ನೀರು ಬರುತ್ತಿದ್ದು, ಗಗನಚುಕ್ಕಿ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ.

ಕಬಿನಿ ಮತ್ತು ಕಾವೇರಿ ಜಲಾನಯ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು ಕಬಿನಿ ಜಲಾಶಯ ಭರ್ತಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ ಸಾವಿರರೂ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.

ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸಾಕಷ್ಟು ಬೀಳುತ್ತಿರುವುದರಿಂದ ಕೆಆರ್‍ಎಸ್‍ಗೆ ಅಕ ಪ್ರಮಾಣದ ನೀರು ಬರುತ್ತಿರುವುದರಿಂದ 30 ಸಾವಿರ ಕ್ಯೂಸೆಕ್ ನೀರು ನದಿಗೆ ಬಂದು ಸೇರುತ್ತಿರುವ ಹಿನ್ನೆಲೆಯಲ್ಲಿ ಗಗನಚುಕ್ಕಿ ಜಲಪಾತ ವನಸಿರಿಯೊಂದಿಗಿನ ಪ್ರಕೃತಿಯ ರಮ್ಯ ಸೊಬಗು ಆಕರ್ಷಿಸುತ್ತಿದೆ.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ನೀರಿಲ್ಲದೆ ಒಣಗಿದ್ದ ಜಲಾಶಯವು ಇದೀಗ ಜೀವಕಳೆ ಪಡೆದಿದೆ. ಆದರೆ ಈಜಲ ಸಿರಿಯನ್ನು ಕಣ್ತುಂಬಿಕೊಳ್ಳವ ಅವಕಾಶ ಪ್ರವಾಸಿಗರಿಗೆ ಇಲ್ಲವಾಗಿದೆ.

ಕಾರಣ ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ನಿರ್ಬಂಸಿರುವುದರಿಂದ ಜಲಪಾತ ವೀಕ್ಷಣೆಗೆ ಅವಕಾಶ ಇಲ್ಲವಾಗಿದೆ.

ಸ್ಥಳೀಯರು ಆಗಾಗ ಬಂದು ಜಲಧಾರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ತಾಲ್ಲೂಕು ಮತ್ತು ಜಿಲ್ಲಾಡಳಿತ ಸರಿಯಾದ ಮಾಹಿತಿ ನೀಡದ ಕಾರಣ ನೀರಿನ ಬೋರ್ಗರೆಯುವ ದೃಶ್ಯವನ್ನು ಕಾಣ್ತುಂಬಿಕೊಳ್ಳಲು ಸಾಧ್ಯವಾಗದೆ ಪ್ರವಾಸಿಗರು ಬೇಸರದಿಂದ ಹಿಂದಿರುಗುತ್ತಿದ್ದಾರೆ.

Facebook Comments

Sri Raghav

Admin