ಇಂದಿನಿಂದ ಪ್ರವಾಸಿಗರಿಗೆ ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ,ಜು.5-ಕೋವಿಡ್-19 ಅನ್‍ಲಾಕ್ ಬಳಿಕ ಗಗನಚುಕ್ಕಿ ಜಲಪಾತ ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಿದ್ದು, ಆಗಮಿಸುವವರಿಗೆ ಕಣ್ ತುಂಬ ಮುದನೀಡಲಿದೆ. ಕೋವಿಡ್-19 ಮಾರ್ಗಸೂಚಿಯನ್ನು ಪ್ರವಾಸಿಗರು ಪಾಲಿಬೇಕು .

ವೀಕ್ಷಣೆ ವೇಳೆ ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕರ್ ಧರಿಸುವುದೂ ಸೇರಿದಂತೆ ಕೊರೊನಾ ನಿಯಮಾವಗಳಿಗಳನ್ನು ಪ್ರವಾಸಿಗರು ಪಾಲಿಸಬೇಕು. ಮಾಸ್ಕ್ ಧರಿಸಿದವರೆಗೆ ಮಾತ್ರ ಪ್ರವೇಶ ಅವಕಾಶ ಎಂದು ತಾಲ್ಲೂಕು ಆಡಳಿತ ಸೂಚಿನೆ ನೀಡಿದೆ.

ರಾಜ್ಯದ್ಯಂತ ಅನ್‍ಲಾಕ್ 3.0 ಜಾರಿಯಾಗೆ ಬಂದ ಈಹಿನ್ನೆಲೆ ತಾಲ್ಲೂಕಿನ ಶಿವನಸಮುದ್ರ(ಬ್ಲಫ್)ಸಮೀಪದ ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಇಂದಿನಿಂದ ಬೆಳಗ್ಗೆ 9ರಿಂದ ಸಂಜೆ 5ಗಂಟೆ ವರಗೆ ಅವಕಾಶ ಕಲ್ಪಿಸಿದೆ.
ಕೊರೋನಾ ಎರಡನೇ ಅಲೆಯ ಭೀಕರತೆಗೆ ಕಳೆದ 2 ತಿಂಗಳಿನಿಂದ ಗಗನಚುಕ್ಕಿ ಜಲಪಾತಕ್ಕೆ ಪ್ರವಾಸಿಗರ ನಿರ್ಬಂಧ ಹೇರಲಾಗಿತ್ತು. ಈಗ ಸಾರ್ವಜನಿಕರಿಗೆ ಮುಕ್ತವಾಗಿದೆ.

ಜೊತೆಗೆ ಜಲಾಶಯದಿಂದ ನೀರಿನ ಹೊರಹರಿವಿನ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ಈಗ ಗಗನಚುಕ್ಕಿ ಜಲಪಾತವು ಮೈತುಂಬಿ ಹರಿದು ತಮಿಳುನಾಡಿಗೆ ಸೇರುತ್ತಿದೆ ಲಾಕ್‍ಡೌನ್ ನಿಂದ ಕಂಗೆಟ್ಟಿದ್ದ ಪ್ರವಾಸಿಗರಿಗೆ ಈಗ ಮುದ ನೀಡಲಿದೆ.

Facebook Comments

Sri Raghav

Admin