ಗಗನಚುಕ್ಕಿ ಜಲಪಾತಕ್ಕೆ ಹೈಟೆಕ್ ಸ್ಪರ್ಶ, ಸಿದ್ಧಗೊಂಡಿದೆ ನೀಲನಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ :  ತಾಲ್ಲೂಕಿನ ಪ್ರವಾಸಿ ತಾಣದಲ್ಲೊ ಂದಾದ ಗಗನಚುಕ್ಕಿ ಜಲಪಾತಕ್ಕೆ ಹೈಟೆಕ್ ಸ್ಪರ್ಶ ನೀಡುವ ಯೊಜನೆಗೆ ಚಾಲನೆ ನೀಡಲಾಗುತ್ತಿದೆ. ಪ್ರವಾಸಿಗರಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರದ ಅನುಮೋದನೆ ಮೇರೆಗೆ ಪ್ರವಾಸೋದ್ಯಮ ಹಾಗೂ ಪಿಡಬ್ಲ್ಯೂಡಿ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ಖಾಸಗಿ ಸಂಸ್ಥೆಗೆ ಕಾಮಗಾರಿಯ ಟೆಂಡರ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ನಯಾಗರ ಪಾಲ್ಸ್ ಎಂದು ಬಿಂಬಿತವಾಗಿದ್ದ ಗಗನಚುಕ್ಕಿ ಜಲಪಾತ ಸುಮಾರು 3.54 ಕೋಟಿ ರೂ.ಗಳಲ್ಲಿ ಅಭಿವೃಧ್ಧಿ ಕಾಮಗಾರಿಯನ್ನು ನಡೆಸಲು ಹಾಗೂ ಪ್ರವಾಸಿಗರನ್ನು ಗಮನದಲ್ಲಿಟ್ಟು ಕೊಂಡು ಮೆಟ್ಟಿಲು, ಗ್ಯಾಲರಿ, ಪಾತ್‍ವೇ, ವೀವ್ ಪಾಯಿಂಟ್, ಲಯಾಂಡ್ ಸ್ಕೇಪಿಂಗ್ ನಿರ್ಮಾಣ ಮಾಡಲಾಗುತ್ತಿದೆ.
ಇದಕ್ಕಾಗಿ ನೀಲಿ ನಕ್ಷೆಯೂ ಸಿದ್ದಗೊಂಡಿದ್ದು ಕಾಮಗಾರಿ ಪ್ರಾರಂಭಿಸಲು ಬೇಕಿರುವ ವಸ್ತುಗಳನ್ನು ಸಾಗಿಸಲು ಸೌಲಭ್ಯ ಮಾಡಿಕೊಳ್ಳಲಾಗುತ್ತಿದೆ.

ಸದ್ಯ ಗಗನಚುಕ್ಕಿಯಲ್ಲಿ ಒಂದು ಕಡೆ ಮೆಟ್ಟಿಲುಗಳಿವೆ. ಅವುಗಳಲ್ಲೇ ಹೋಗಬೇಕು ಮತ್ತು ವಾಪಸ್ ಬರಬೇಕಿದೆ ಈಹಿನ್ನೆಲೆಯಲ್ಲಿ ಮತ್ತೊಂದು ಮೆಟ್ಟಿಲು ನಿರ್ಮಿಸಿ ಹೋಗಲು ಮತ್ತು ಬರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಮೇಲಿನ ಭಾಗದಲ್ಲಿ ಸದ್ಯ 250ಕ್ಕೂ ಹೆಚ್ಚು ಜನರು ಕುಳಿತು ವೀಕ್ಷಿಸುವ ಗ್ಯಾಲರಿಯನ್ನು ನಿರ್ಮಿಸಲಾಗುತ್ತಿದೆ ಅಲ್ಲದೆ ಪಾತ್‍ವೇ ಹಾಗೂ ಕೆಲವೆಡೆ ವೀವ್ ಪಾಯಿಂಟ್‍ಗಳು ಹಾಗೂ ವಿವಿಧ ಅಭಿವೃದ್ಧಿಗೆ 2018ರಲ್ಲಿಯೇ ಕಾಮಗಾರಿಗೆ ಅನುಮೋದನೆ ಸಿಕ್ಕಿತ್ತು ಜೊತೆಗೆ ನಾಲ್ಕು ಬಾರಿ ಟೆಂಡರ್ ಕರೆದಿದ್ದರೂ ಕಾಮಗಾರಿ ಮಾಡುವುದು ಕಷ್ಟವೆಂದು ಯಾರೂ ಆಸಕ್ತಿ ತೋರಲು ಮುಂದೆ ಬರದ ಕಾರಣ ಪ್ರವಾಸಿಗರು ಕನಸು ಕನಸಾಗಿ ಉಳಿಸಿಕೊಂಡಿತ್ತು.

ಈಗ ಆಕನಸಿಗೆ ಮರು ಜೀವ ಬಂದಂತೆ ಕಾಣುತ್ತಿದೆ. ಬೆಂಗಳೂರಿನ ಖಾಸಗಿ ಕಂಪನಿ ಒಂದು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಾಮಗಾರಿ ಸಂಬಂಧ ಪ್ರವಾಸೋದ್ಯಮ ಹಾಗೂ ಪಿಡಬ್ಲ್ಯೂಡಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಗಳು ಜೊತೆಯಲ್ಲಿ ಗಗನಚುಕ್ಕಿ ಜಲಪಾತ್ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ ಹಾಗೂ ಅರಣ್ಯ ಅಧಿಕಾರಿಗಳು ಅಭಿವೃಧ್ಧಿ ವಿಚಾರದಲ್ಲಿ ತಮ್ಮ ಸಲಹೆಗಳನ್ನು ನೀಡಿದ್ದಾರೆ.

ಇದಷ್ಟೇ ಅಲ್ಲದೆ ಮೇಲಿನ ಭಾಗದಲ್ಲಿ ವಾಹನ ನಿಲುಗಡೆ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಮಾಡುವ ನಿಟ್ಟಿನಲ್ಲಿ 2ಕೋಟಿ ರೂ ವೆಚ್ಚದ ಯೋಜನೆಯ ಪ್ರಸಾವನೆಯನ್ನು ಸರ್ಕಾರದ ಅನುಮತಿಗೆ ಕಳುಹಿಸಿಕೊಡಲಾಗಿದೆ. ಗಗನಚುಕ್ಕಿಯಲ್ಲಿ ಮಹತ್ವದ ರೋಪ್‍ವೇ ಅಥವಾ ಸ್ಟೀಲ್‍ಬ್ರಿಡ್ಜ್ ನಿರ್ಮಾಣಕ್ಕೂ ಯೋಜನೆಯನ್ನು ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಈಸಂಬಂಧ ಮಾಸ್ಟರ್ ಪ್ಲ್ಯಾನ್ ಮಾಡಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಎಲ್ಲವೂ ಅಂದುಕೊಂಡತೆ ನಡೆದರೆ ಯೋಜನೆ ಅನುಷ್ಠಾನವಾದರೆ ಗಗನಚುಕ್ಕಿಯಿಂದ ಭರಚುಕ್ಕಿಗೆ ರೋಪ್‍ವೇ ಅಥವಾ ಸ್ಟೀಲ್‍ಬ್ರಿಡ್ಜ್ ಮೂಲಕವೇ ಸಂಚರಿಸಬಹುದು. ಅಲ್ಲದೆ ಇಲ್ಲಿ ಪ್ರವಾಸಿಗರಿಗೆ ವಿಹಂಗಮ ನೋಟವೂ ಸಿಗಲಿದೆ. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಂಡ್ಯ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಂ.ಎನ್.ಹರೀಶ್ ಮಾತನಾಡಿ , 2018ರಲ್ಲಿ ಅನುಮೋದನೆಯಾಗಿದ್ದ ಯೋಜನೆ ಕಾಮಗಾರಿ ಯನ್ನು ಬೆಂಗಳೂರಿನ ಸಂಸ್ಥೆ ವಹಿಸಿಕೊಂಡಿದೆ.
ಪ್ರವಾಸೋದ್ಯಮ ಇಲಾಖೆ ಸಚಿವ ಹಾಗೂ ಕೇಂದ್ರ ಕಛೇರಿ ಸೂಚನೆ ಮೇರೆಗೆ ಕಾಮಗಾರಿ ನಡೆಯಲಿವೆ ಎಂದರು.

ಶಿವಕುಮಾರ್, ಮಳವಳ್ಳಿ

Facebook Comments