ಕಾಶ್ಮೀರದ 108 ಪೊಲೀಸರಿಗೆ ಶೌರ್ಯ ಪ್ರಶಸ್ತಿ, ಸಿಆರ್‌ಪಿಎಫ್‌ಗೆ 76 ಶೌರ್ಯ ಪದಕ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.25- ಎಪ್ಪತ್ತೊಂದನೆ ಗಣರಾಜ್ಯೋತ್ಸವದ ಪ್ರಯುಕ್ತ ಪೊಲೀಸ್ ಶೌರ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಜಮ್ಮು-ಕಾಶ್ಮೀರದ 108 ಪೊಲೀಸರಿಗೆ ಶೌರ್ಯ ಪ್ರಶಸ್ತಿ ಲಭಿಸಿವೆ.  ಸಿಆರ್‌ಪಿಎಫ್‌ ಎರಡನೆ ಸ್ಥಾನದಲ್ಲಿದ್ದು, ಒಟ್ಟು 76 ಶೌರ್ಯ ಪದಕಗಳನ್ನು ಗಳಿಸಿವೆ.

ಕಾಶ್ಮೀರದ ಪೊಲೀಸರ ಪೈಕಿ ಮೂವರಿಗೆ ರಾಷ್ಟ್ರಪತಿ ಪೊಲೀಸ್ ಶೌರ್ಯ ಪದಕಗಳನ್ನು (ಪಿಪಿಎಂಜಿ) ನೀಡಲಾಗಿದೆ. ಇವರಲ್ಲಿ ಒಬ್ಬರಿಗೆ ಮರಣೋತ್ತರವಾಗಿ ಈ ಪದಕ ಘೋಷಿಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ ಕಾಶ್ಮೀರ ಪೊಲೀಸರಿಗೆ ಈ ಪದಕಗಳು ಲಭಿಸಿವೆ.

76 ಪದಕಗಳೊಂದಿಗೆ ಎರಡನೆ ಸ್ಥಾನದಲ್ಲಿರುವ ಸಿಆರ್‍ಪಿಎಫ್ ಕೂಡ ಭಯೋತ್ಪಾದನೆ ನಿಗ್ರಹದಲ್ಲಿ ಗಣನೀಯ ಕಾರ್ಯಾಚರಣೆ ನಡೆಸಿದೆ. ಛತ್ತೀಸ್‍ಗಢದ ಪೊಲೀಸರಿಗೆ ಒಟ್ಟು 33 ಶೌರ್ಯ ಪದಕಗಳನ್ನು ಘೋಷಿಸಲಾಗಿದೆ.

Facebook Comments