ಮ್ಯಾಕ್ಸ್ ವೆಲ್ ಆಟದ ಬಗ್ಗೆ ಗಂಭೀರ್ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಏ. 7- ಆಸ್ಟ್ರೇಲಿಯಾದ ಅಲೌಂಡರ್ ಗ್ಲೆನ್‍ಮ್ಯಾಕ್ಸ್ ವೆಲ್ ಅವರು ಅಸ್ಥಿರ ಪ್ರದರ್ಶನ ತೋರುತ್ತಿರುವುದರಿಂದಲೇ ಅವರು ಐಪಿಎಲ್‍ನಲ್ಲಿ ಹಲವು ತಂಡಗಳ ಪರ ಆಡಿದ್ದಾರೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ 2 ಬಾರಿ ಐಪಿಎಲ್ ಚಾಂಪಿಯನ್ ನಾಯಕ ಗೌತಮ್ ಗಂಭೀರ್ ಅವರು ಮ್ಯಾಕ್ಸಿ ಬ್ಯಾಟಿಂಗ್ ಬಗ್ಗೆ ಕಿಡಿಕಾರಿದ್ದಾರೆ.

32 ವಯಸ್ಸಿನ ಆಸ್ಟ್ರೇಲಿಯಾದ ಅಲೌಂಡರ್ ಮ್ಯಾಕ್ಸ್‍ವೆಲ್ ಅವರು ಯುಎಇಯಲ್ಲಿ ನಡೆದ 13ನೆ ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದರು. ಆದರೆ ಆಡಿದ 13 ಪಂದ್ಯಗಳಿಂದ ಕೇವಲ 108 ರನ್‍ಗಳನ್ನಷ್ಟೇ ಗಳಿಸಿರುವುದು ಅವರ ಕಳಪೆ ಪ್ರದರ್ಶನವನ್ನು ಎತ್ತಿ ತೋರಿಸುತ್ತದೆ.

ಐಪಿಎಲ್ ನಂತರ ಭಾರತ ವಿರುದ್ಧ ನಡೆದ 3 ಏಕದಿನ ಪಂದ್ಯಗಳಲ್ಲಿ ಮ್ಯಾಕ್ಸ್‍ವೆಲ್ ಅವರು 83.50ರ ಸರಾಸರಿಯಲ್ಲಿ ಕೇವಲ 167 ರನ್‍ಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದರು, ನಂತರ ನಡೆದ ಟ್ವೆಂಟಿ-20 ಸರಣಿಯಲ್ಲೂ ತಮ್ಮ ಕಳಪೆ ಪ್ರದರ್ಶನವನ್ನೇ ಮುಂದುವರಿಸಿದರು.

ಮ್ಯಾಕ್ಸ್‍ವೆಲ್ ಅವರು ಕಳಪೆ ಪ್ರದರ್ಶನ ತೋರುತ್ತಾ ಬಂದಿದ್ದರೂ ಕೂಡ ಆರ್‍ಸಿಬಿ ತಂಡದ ಫ್ರಾಂಚೈಸಿಗಳು ಐಪಿಎಲ್ 14ರ ಹರಾಜಿನಲ್ಲಿ ಅವರಿಗೆ 14.25 ಕೋಟಿ ರೂ. ಕೊಟ್ಟು ಬಿಕರಿ ಮಾಡಿಕೊಂಡಿದೆ. ಅಸ್ಥಿರ ಪ್ರದರ್ಶನ ತೋರುತ್ತಾ ಬಂದಿರುವ ಮ್ಯಾಕ್ಸ್‍ವೆಲ್ ಕೋಲ್ಕತ್ತಾ ನೈಟ್ ರೈಡರ್ಸ್‍ನ ಅಲೌಂಡರ್ ಆ್ಯಂಡ್ರೂ ರಸೆಲ್ ಅವರ ಬ್ಯಾಟಿಂಗ್ ನೋಡಿಕೊಂಡು ಕಲಿತುಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

Facebook Comments