ಟಾಯ್ಲೆಟ್ ಸ್ವಚ್ಛಗೊಳಿಸಿ ಶಾಸಕ ಸಿ.ಟಿ.ರವಿ, ವಿಡಿಯೋ ವೈರಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಅ.3- ಮಹಾತ್ಮ ಗಾಂಧೀ ಜಯಂತಿ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಪೊರಕೆ ಹಿಡಿದು ಶೌಚಾಲಯ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತದ ಜಾಗೃತಿಯೊಂದಿಗೆ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿಸಿದ್ದಾರೆ.

ನಗರದ ರಾಮನಹಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನದಲ್ಲಿ ಸ್ವತಃ ಶಾಸಕರು ಪೊರಕೆ ಹಿಡಿದು ಶೌಚಾಲಯವನ್ನು ಸ್ವಚ್ಛ ಮಾಡಿ ವಿಶಿಷ್ಟವಾಗಿ ಜಾಗೃತಿ ಮೂಡಿಸುವ ಮೂಲಕ ಈ ದಿನಕ್ಕೆ ವಿಶಿಷ್ಟ ಅರ್ಥ ಬರುವಂತೆ ಮಾಡಿದ್ದಾರೆ.

ಬಳಿಕ ಮಾತನಾಡಿದ ಅವರು, ಪ್ರಕೃತಿ ಮಾತೆಗೆ ಮನುಷ್ಯನ ಆಸೆ ಈಡೇರಿಸುವ ಶಕ್ತಿಯಿದೆಯೇ ಹೊರತು ದುರಾಸೆಯಲ್ಲ ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಿದೆ ಎಂದರು.

ಭಾರತೀಯ ಸಂಸ್ಕøತಿಯಲ್ಲಿ ಪರಿಸರಕ್ಕೆ ದೈವಿ ಸ್ವರೂಪ ನೀಡಲಾಗಿದೆ. ಮಹಾತ್ಮಗಾಂೀಧಿಜಿಯವರೇ ಹೇಳಿದಂತೆ ಸ್ವಚ್ಛತೆ ಇರುವಲ್ಲಿ ಭಗವಂತ ನೆಲೆಸಿರುತ್ತಾನೆ, ಮಲಿನತೆ ಇದ್ದಲ್ಲಿ ಮನಸ್ಥಿತಿಯು ಹಾಗೇ ಇರುತ್ತದೆ, ಆ ನಿಟ್ಟಿನಲ್ಲಿ ಮನಸ್ಥಿತಿಯೊಂದಿಗೆ ಪರಿಸ್ಥಿತಿಯು ಸುಧಾರಣೆಗೊಳ್ಳಬೇಕು. ಸ್ವಚ್ಛತೆಯನ್ನು ನಮ್ಮ ಧ್ಯೇಯವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ವಚ್ಛತಾ ಅಭಿಯಾನ ಎಂಬುದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿನಿತ್ಯದ ಬದುಕಾಗಬೇಕು. ಪ್ರಾಣಿ ಹಾಗೂ ಸಸ್ಯ ಸಂಕುಲದೊಂದಿಗೆ ಉತ್ತಮ ಒಡನಾಟ ಹೊಂದಲು ಪರಿಸರ ಸಂರಕ್ಷಣೆ ಜೊತೆಗೆ ಸ್ವಚ್ಛತೆ ನಮ್ಮ ಧ್ಯೇಯವಾಗಬೇಕಿದೆ ಎಂದು ಕರೆ ನೀಡಿದರು.

ಲಾಲ್ ಬಹದ್ದೂರು ಶಾಸ್ತ್ರೀಜಿಯವರು ದೇಶದಲ್ಲಿ ಶೌರ್ಯದ ಪ್ರತೀಕವಾಗಿದ್ದವರು. ಶಾರೀರಿಕವಾಗಿ ಬಲಾಡ್ಯರಲ್ಲದಿದ್ದರೂ, ಮಾನಸಿಕವಾಗಿ ಶೌರ್ಯ ಉಳ್ಳ, ಸರಳ ಸಜ್ಜನಿಕೆ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ದಿಟ್ಟತನ, ಪ್ರಾಮಾಣಿಕತೆ ಎಲ್ಲರಿಗೂ ಆದರ್ಶವಾಗಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಕಾರಿ ಸೋಮಶೇಖರ್, ತಾಲ್ಲೂಕು ಅಕಾರಿ ಎಸ್.ಆರ್. ಬಡಿಗೇರ್, ವಸತಿ ನಿಲಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Facebook Comments