ಗೋಲ್ಡನ್‍ ಸ್ಟಾರ್ ‘ಗಿಮಿಕ್’ ಆಟ

ಈ ಸುದ್ದಿಯನ್ನು ಶೇರ್ ಮಾಡಿ

gimikkಸಾಮಿ ಪಿಕ್ಚರ್ಸ್ ಲಾಂಛನದಡಿಯಲ್ಲಿ ಶ್ರೀ ದೀಪಕ್ ನಿರ್ಮಿಸುತ್ತಿರುವ ಗಿಮಿಕ್ ಚಿತ್ರಕ್ಕೆ ಈಗ ಬೆಂಗಳೂರಿನಲ್ಲಿ ಮತ್ತೊಂದು ಹಂತದ ಚಿತ್ರೀಕರಣ ಪ್ರಾರಂಭವಾಗಿದೆ. ಇತ್ತೀಚೆಗೆ ಶ್ರೀಲಂಕಾದ ನೆಗಂಬೋ ಸುತ್ತಮುತ್ತ 20 ದಿವಸಗಳ ಕಾಲ ಗಣೇಶ್, ರೋನಿಕಾಸಿಂಗ್ ಅಭಿನಯದ ಹಲವಾರು ಸನ್ನಿವೇಶಗಳನ್ನು ಹಾಗೂ ಒಂದು ಗೀತೆಯನ್ನು ವಿಘ್ನೇಶ್ ಛಾಯಾಗ್ರಹಣದಲ್ಲಿ ನಿರ್ದೇಶಕ ನಾಗಣ್ಣ ಚಿತ್ರಿಸಿಕೊಂಡರು.

ಚಿತ್ರಕ್ಕೆ ನಂಜುಂಡ ಸಂಭಾಷಣೆ, ಕವಿರಾಜ್ ಸಾಹಿತ್ಯ, ಅರ್ಜುನ್ ಜನ್ಯಾ, ಸಂಗೀತ ವಿಘ್ನೇಶ್ ಛಾಯಾಗ್ರಹಣ, ಸುರೇಶ್‍ಕಲೆ, ಮುರಳಿ, ನೃತ್ಯ, ಸುರೇಶ್ ಅರಸ್ ಸಂಕಲನ, ನಾರಾಯಣ್ ನಿರ್ದೇಶನ ಸಹಕಾರ, ರಾಮಣ್ಣ ನಿರ್ಮಾಣ, ನಿರ್ವಹಣೆಯಿದ್ದು ಚಿತ್ರವನ್ನು ಸಂಗೊಳ್ಳಿ ರಾಯಣ್ಣ, ಮುನಿರತ್ನ ಕುರುಕ್ಷೇತ್ರ ಹೆಸರಾಂತ ಚಿತ್ರಗಳನ್ನು ನಿರ್ದೇಶಿಸಿದ ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ತಾರಾಗಣದಲ್ಲಿ ಗಣೇಶ್, ರೋನಿಕಾಸಿಂಗ್, ಸುಂದರರಾಜ್, ಶೋಭ್‍ರಾಜ್, ಮಂಡ್ಯ ರಮೇಶ್, ಚಿ. ಗುರುದತ್, ರವಿಶಂಕರ್‍ಗೌಡ, ಸಂಗೀತಾ, ಶ್ವೇತಾ ಮುಂತಾದವರಿದ್ದಾರೆ.

Facebook Comments