ಬೆಂಗಳೂರಲ್ಲಿ ವಿನಾಯಕನ ವಿಸರ್ಜನೆಗೆ ಎದುರಾಗುವುದೇ ವಿಘ್ನ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, – ರಾಜ್ಯ ಸರ್ಕಾರದಿಂದ 2019- 20ನೇ ಸಾಲಿನ ಬಿಬಿಎಂಪಿ ಬಜೆಟ್ ತಡೆ ಹಿಡಿದಿರುವ ಹಿನ್ನೆಲೆಯಲ್ಲಿ ವಿಘ್ನ ನಿವಾರಕ ಗಣೇಶಮೂರ್ತಿ ವಿಸರ್ಜನೆಗೂ ವಿಘ್ನ ಎದು ರಾಗಿದೆ. ಗಣೇಶ ಹಬ್ಬ ಹತ್ತಿರವಾಗು ತ್ತಿದ್ದರೂ ಗಣೇಶಮೂರ್ತಿ ವಿಸರ್ಜನೆಗೆ ಬಿಬಿಎಂಪಿಯಿಂದ ಟೆಂಡರ್‍ನೀಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಕಳೆದ 10 ದಿನಗಳಿಂದ ಸಮಸ್ಯೆಆಗಿರುವ ಆನ್‍ಲೈನ್ ಟೆಂಡರ್ ವ್ಯವಸ್ಥೆ ಇ-ಪ್ರಾಕ್ಯೂರ್‍ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಿರುವ ಪಾಲಿಕೆ, ಪ್ರತಿವರ್ಷ ಹಬ್ಬಕ್ಕೆ ಇನ್ನು ಒಂದು ತಿಂಗಳು ಬಾಕಿ ಇರುವಾಗಲೇ ಟೆಂಡರ್‍ಕರೆದು ಪ್ರಕ್ರಿಯೆ ಮುಗಿಸುತ್ತಿತ್ತು.

ಟೆಂಡರ್ ಪಡೆದವರು ಗಣೇಶ ಮೂರ್ತಿ ವಿಸರ್ಜನೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಟೆಂಡರ್ ಸಿಗದ ಕಾರಣ ಗಣೇಶ ವಿಸರ್ಜನೆಗೆ ತೊಡಕು ಉಂಟಾಗಲಿದೆ.ಪಾಲಿಕೆ ನೀತಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಗಣೇಶ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್‍ಮಾತನಾಡಿ, ಟೆಂಡರ್ ಪ್ರಕ್ರಿಯೆ ಇನ್ನೂ ಅಂತಿಮವಾಗದಿರುವುದು ನಿಜ. ಇ-ಪ್ರಾಕ್ಯೂರ್‍ಮೆಂಟ್‍ನಲ್ಲಿ ತಾಂತ್ರಿಕದೋಷ ಇರುವುದು ನಿಜ. ಕೆಆರ್‍ಐಡಿಎಲ್ ಮೂಲಕ ಟೆಂಡರ್ ನೀಡುವ ಬಗ್ಗೆ ತೀರ್ಮಾನಿ ಸಲಾಗುವುದು. ನಗರದಲ್ಲಿ ಗಣೇಶ ವಿಸರ್ಜನೆಗೆ ಯಾವುದೇ ತೊಂದರೆ ಯಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ