ಪೊಲೀಸರಿಗೆ ಶರಣಾದ ವಿಕಾಸ್ ದುಬೆ ಆಪ್ತ ಸಹಚರ ಗೋಪಾಲ್

ಈ ಸುದ್ದಿಯನ್ನು ಶೇರ್ ಮಾಡಿ

ಖಾನ್ಪುರ, ಜು.30- ಉತ್ತರ ಪ್ರದೇಶದ ಖಾನ್ಪುರದಲ್ಲಿ 8 ಪೊಲೀಸರನ್ನು ಹತ್ಯೆ ಮಾಡಿದ್ದ ಕುಖ್ಯಾತ ಕ್ರಿಮಿನಲ್ ವಿಕಾಸ್ ದುಬೆ ಆಪ್ತ ಸಹಚರ ಗೋಪಾಲ್ ಸೈನಿ ಪೊಲೀಸರ ಮುಂದೆ ಶರಣಾಗಿದ್ದಾನೆ.

ಈತನ ತಲೆಗೆ ಪೊಲೀಸರು ಒಂದು ಲಕ್ಷ ನಗದು ಬಹುಮಾನ ಘೋಷಿಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮೂವರು ಸಬ್‍ಇನ್ಸ್‍ಪೆಕ್ಟರ್‍ಗಳು ಸೇರಿದಂತೆ ಎಂಟು ಪೊಲೀಸರ ನರಮೇಧ ನಡೆಸಿದ್ದ ವಿಕಾಸ್ ದುಬೆ ತಂಡದಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಗೋಪಾಲ್ ಸೈನಿ ಖಾನ್ಪುರ ನ್ಯಾಯಾಲಯದ ಮುಂದೆ ಶರಣಾದ. ನಂತರ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಜುಲೈ 3ರಂದು ಖಾನ್ಪುರದ ಬಕ್ರು ಗ್ರಾಮದಲ್ಲಿ ವಿಕಾಸ್ ದುಬೆ ಮತ್ತು ಆತನ ಸಹಚರರು 8 ಪೊಲೀಸರನ್ನು ಹತ್ಯೆ ಮಾಡಿದ್ದರು.

ಆನಂತರ ವಿಶೇಷ ಪೊಲೀಸ್ ಪಡೆ ಮತ್ತು ಖಾನ್ಪುರ ಪೊಲೀಸರು ಗೋಪಾಲ್ ಸೈನಿಗಾಗಿ ಲುಕ್‍ಔಟ್ ನೋಟಿಸ್ ಜಾರಿಗೊಳಿಸಿ 1 ಲಕ್ಷ ರೂ. ಬಹುಮಾನ ಘೋಷಿಸಿದ್ದರು.

Facebook Comments

Sri Raghav

Admin