ಚರಸ್-ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15- ಮಾದಕ ವಸ್ತು ಚರಸ್ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಯಶವಂತಪುರ ಠಾಣೆ ಪೊಲೀಸರು ಬಂಸಿ ಕಾರು ಹಾಗೂ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೊಹಮ್ಮದ್ ಸಲೀಂ(26), ಸಯ್ಯದ್ ತಂಜೀಮ್(32) ಮತ್ತು ಮೊಹಮ್ಮದ್ ಶಿಬಾನ್(21) ಬಂತ ಆರೋಪಿಗಳು. ಯಶವಂತಪುರ ವ್ಯಾಪ್ತಿಯ ಜೆಪಿಪಾರ್ಕ್ ಆಟದ ಮೈದಾನದಲ್ಲಿ ಮೂವರು ಓಮ್ನಿ ಕಾರಿನಲ್ಲಿ ಮಾದಕವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಮೂವರನ್ನು ಬಂಸಿ 2 ಕೆಜಿ ಚೆರಸ್ ಮತ್ತು 100 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಓಮ್ನಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ತಮಿಳುನಾಡಿನ ಊಟಿಯಲ್ಲಿ ರೆಹಮಾನ್ ಎಂಬಾತ ಕಡಿಮೆ ಬೆಲೆಗೆ ನಮಗೆ ತಂದುಕೊಟ್ಟಿದ್ದು, ನಾವು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.
ಇದೀಗ ತಲೆಮರೆಸಿಕೊಂಡಿರುವ ರೆಹಮಾನ್‍ಗಾಗಿ ಪತ್ತೆಕಾರ್ಯ ಮುಂದುವರೆದಿದೆ.

# ಇಬ್ಬರ ಬಂಧನ : 17 ಕೆಜಿ ಗಾಂಜಾ ವಶ  : 


ಕಾವೇರಿಪುರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೇರಿ ಇಬ್ಬರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಸಿ 3.40 ಲಕ್ಷ ರೂ. ಮೌಲ್ಯದ 17 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ವಿದ್ಯಮಾನ್ಯನಗರ ನಿವಾಸಿ ಪುನೀತ್(30) ಮತ್ತು ಆರೂಡಿ ಗ್ರಾಮದ ಆನಂದ್‍ಕುಮಾರ್(39) ಬಂತ ಆರೋಪಿಗಳು. ಕಾವೇರಿಪುರದ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಪುನೀತ್ ಎಂಬಾತನನ್ನು ಬಂಸಿ ಒಂದು ಕೆಜಿ ಗಾಮಜಾ ವಶಪಡಿಸಿಕೊಂಡು, ಆತನ ವಾಸದ ಮನೆಯಲ್ಲಿದ್ದ 3 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈತ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಆನಂದ ಕುಮಾರನನ್ನು ಬಂಸಿ 13 ಕೆಜಿ ಗಾಮಜಾ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಂದ ಆರೋಪಿ ಆನಂದಕುಮಾರ್ ಗಾಂಜಾ ಪಡೆದುಕೊಳ್ಳುತ್ತಿದ್ದುದು ವಿಚಾರಣೆಯಿಂದ ಗೊತ್ತಾಗಿದೆ.

Facebook Comments

Sri Raghav

Admin