BIG BREAKING : ಸ್ಯಾಂಡಲ್‍ವುಡ್‍ನ ಪ್ರತಿಷ್ಠಿತ ಹಿರಿಯ ನಟ-ನಟಿಯರ ಮನೆಯಲ್ಲಿ ಗಾಂಜಾ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.1- ಸ್ಯಾಂಡಲ್‍ವುಡ್‍ನ ಮಾದಕ ನಂಟು ಅಲ್ಲೋಲ-ಕಲ್ಲೋಲ ಸೃಷ್ಟಿಸಿದ ಬೆನ್ನಲ್ಲೇ ತನಿಖೆ ನಡೆಸುತ್ತಿರುವ ಎನ್‍ಸಿಬಿ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಪ್ರತಿಷ್ಠಿತ ಹಿರಿಯ ನಟ-ನಟಿಯರ ಮನೆಯಲ್ಲಿ ಕೆಜಿಗಟ್ಟಲೆ ಗಾಂಜಾ ದೊರೆತಿದೆ ಎಂದು ಹೇಳಲಾಗಿದೆ.

204 ಕೆಜಿ ಗಾಂಜಾ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಎನ್‍ಸಿಬಿ ತಂಡ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದು, ಮಾದಕ ಜಾಲದ ನಂಟು ಹೊಂದಿರುವ ನಟ-ನಟಿಯರ ಮನೆಗಳನ್ನು ಜಾಲಾಡುತ್ತಿದೆ.

ಹಿರಿಯ ನಟಿಯರಿಬ್ಬರ ನಿವಾಸದಲ್ಲಿ ಭಾರೀ ಪ್ರಮಾಣದಲ್ಲಿ ಗಾಂಜಾ ದೊರೆತಿದೆ ಎಂದು ಹೇಳಲಾಗುತ್ತಿದೆ. ಅದೇ ಬೆನ್ನಲ್ಲೇ ಪ್ರತಿಷ್ಠಿತ ನಟರೊಬ್ಬರ ಮನೆಯಲ್ಲೂ ಕೂಡ ಗಾಂಜಾ ದೊರೆತಿದ್ದು, ಒಟ್ಟಾರೆ 30 ಕೆಜಿಯಷ್ಟು ಗಾಂಜಾವನ್ನು ಎನ್‍ಸಿಬಿ ತನಿಖಾ ತಂಡ ವಶಪಡಿಸಿಕೊಂಡಿದೆ ಎಂದು ಹೇಳಲಾಗಿದೆ.

# 20ಕ್ಕೂ ಹೆಚ್ಚು ಅತೀ ಗಣ್ಯರಿಗೆ ಎನ್‍ಸಿಬಿ ನೋಟೀಸ್..?
ಕಾಂಗ್ರೆಸ್ , ಬಿಜೆಪಿ ಶಾಸಕರ ಇಬ್ಬರು ಮಕ್ಕಳು, ಮಾಜಿ ಸಚಿವರ ಪುತ್ರ ಹಾಗೂ ನಟ-ನಟಿಯರು, ನಿದೇರ್ಶಕರು, ನಿರ್ಮಾಪಕರು, ಸಂಗೀತ ನಿರ್ಮಾಪಕರು ಸೇರಿದಂತೆ ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡಿರುವ 20ಕ್ಕೂ ಹೆಚ್ಚು ಅತೀ ಗಣ್ಯರಿಗೆ ಮಾದಕ ದ್ರವ್ಯ ನಿಯಂತ್ರಣ ದಳ( ಎನ್‍ಸಿಬಿ)ದ ಅಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲು ಮುಂದಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಡ್ರಗ್ಸ್ ಮಾಫಿಯಾದಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರು ಭಾಗಿಯಾಗಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಅಕಾರಿಗಳಿಗೆ ನೀಡಿರುವ ಹೇಳಿಕೆ ಆಧಾರದ ಮೇರೆಗೆ ಎಲ್ಲರಿಗೂ ನೋಟೀಸ್ ಜಾರಿ ಮಾಡಲು ಎನ್‍ಸಿಬಿ ಅಕಾರಿಗಳು ನಿರ್ಧರಿಸಿದ್ದಾರೆ.

ಒಂದು ವೇಳೆ ಎನ್‍ಸಿಬಿ ಅಕಾರಿಗಳು ನೋಟೀಸ್ ನೀಡಿದರೆ, ಮೈಸೂರು ಭಾಗದ ಕಾಂಗ್ರೆಸ್ ನಾಯಕರ ಪುತ್ರ, ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರ ಮಗ, ಕರಾವಳಿ ಭಾಗದ ಮಾಜಿ ಸಚಿವರೊಬ್ಬರ ಪುತ್ರ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.

ಅದರಲ್ಲೂ ಕೆಲವರು ಕನ್ನಡ ಚಿತ್ರರಂಗದಲ್ಲಿ ಅಂಥದ್ದೇನೂ ಇಲ್ಲ ಎಂದು, ಕೆಲವರು ಕನ್ನಡ ಚಿತ್ರರಂಗ ಕ್ಲೀನ್ ಆಗಬೇಕು ಎಂದು ಪರ-ವಿರೋಧ ವಾಗ್ವಾದ ನಡೆಸುತ್ತಿರುವ ಬೆನ್ನಲ್ಲೇ 15 ಮಂದಿ ನಟ-ನಟಿಯರಿಗೆ ನೋಟಿಸ್ ನೀಡಲಾಗುತ್ತದೆ. ಅವರಿಗೆ ಸಂಕಷ್ಟ ಶುರುವಾಗುತ್ತದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾದ ಬಗ್ಗೆ ವಿಚಾರಣೆ ನಡೆಸುತ್ತಿರುವ ಎನ್‍ಸಿಬಿ ಅಕಾರಿಗಳು ಈಗಾಗಲೇ ಮಾಹಿತಿ ಕಲೆಹಾಕಿದ್ದಾರೆ. ಅದರ ಆಧಾರದ ಮೇಲೆ ನಟನಟಿಯರಿಗೆ ನೊಟೀಸ್ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ವಿಚಾರಣೆಯಲ್ಲಿ ಇಂದ್ರಜಿತ್ ಲಂಕೇಶ್ ಅಶ್ಲೀಲ ವಿಡಿಯೋ ಹಾಗೂ ದಾಖಲೆಗಳ ಸಮೇತ ಹಲವಾರು ಪುಟಗಳ ಹೇಳಿಕೆಯನ್ನು ನೀಡಿದ್ದಾರೆ. ಹಾಗೆ 9 ನಟಿಯರು, 6 ಮಂದಿ ನಟರ ಹೆಸರು ಹೇಳಿ ತನಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದು, ಮಾಧ್ಯಮದಲ್ಲಿ ಹೇಳಿಕೆ ಕೊಟ್ಟ ನಂತರ ಬಹಳಷ್ಟು ಕರೆಗಳು ಬರುತ್ತಿವೆ. ಹೀಗಾಗಿ ಕೊಟ್ಟ ಮಾಹಿತಿಯನ್ನು ಗೌಪ್ಯವಾಗಿಡಬೇಕು ಎಂದು ಇಂದ್ರಜಿತ್ ಲಂಕೇಶ್ ಕೋರಿದ್ದಾರೆ. ಅಕಾರಿಗಳು ಕೂಡಾ ಗೌಪ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರತಿಷ್ಠಿತ ಹೋಟೆಲ್‍ಗಳು, ಪಬ್ ಹಾಗೂ ಫಾರ್ಮ್‍ಹೌಸ್‍ನಲ್ಲಿ ಕೆಲವರು ಡ್ರಗ್ಸ್ ಸೇವಿಸುತ್ತಿದ್ದಾರೆ. ಈ ಪಾರ್ಟಿಯಲ್ಲಿ ನಟನಟಿಯರು ಭಾಗಿಯಾಗುತ್ತಿದ್ದರೆಂದು ಇಂದ್ರಜಿತ್ ಲಂಕೇಶ್ ಮಾಹಿತಿ ನೀಡಿದ್ದಾರೆ. ಪ್ರಮುಖವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿನ್ನೆ ವಿಚಾರಣೆ ವೇಳೆ ಕೊಟ್ಟಿರುವ ಮಾಹಿತಿ ಮತ್ತು ದಾಖಲೆಗಳನ್ನು ಆಧರಿಸಿ 15 ಮಂದಿ ನಟನಟಿಯರ ಹಿನ್ನೆಲೆಗಳನ್ನು ಕಲೆ ಹಾಕಲಾಗುತ್ತಿದೆ. ಮಾಹಿತಿಗಳು ಸಂಪೂರ್ಣವಾಗಿ ತಿಳಿದುಬಂದ ಬಳಿಕ ನೊಟೀಸ್ ನೀಡಲಾಗುತ್ತದೆ ಎಂದು ಮೂಲಗಳು ಹೇಳುತ್ತಿವೆ.

ನಿನ್ನೆ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಜಾಲದಲ್ಲಿ ಕನ್ನಡ ಚಿತ್ರರಂಗದ ಕೆಲವು ಮಂದಿ ಭಾಗಿಯಾಗಿದ್ದಾರೆಂದು ಹೇಳಿ ಅವರ ಹೆಸರುಗಳನ್ನು ತಿಳಿಸಿದ್ದಾರೆ. ಡ್ರಗ್ಸ್ ಜಾಲದ ಸುದ್ದಿ ಸೋಟಗೊಳ್ಳುತ್ತಿದ್ದಂತೆ ಮಾಧ್ಯಮದ ಮುಂದೆ ಎದುರಾದ ಇಂದ್ರಜಿತ್ ಲಂಕೇಶ್ಲೀ ಪೊಸರು ರಕ್ಷಣೆ ನೀಡಿ ಮಾಹಿತಿ ಕೇಳಿದರೆ ಕೊಡಲು ಸಿದ್ದ ಎಂದಿದ್ದರು. ಅದೇ ರೀತಿ ನಿನ್ನೆ ಮಾಹಿತಿಯನ್ನು ಒದಗಿಸಿದ್ದಾರೆ.

ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್ ಗಳ ಜೊತೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನಿನ್ನೆ ಇಂದ್ರಜಿತ್ ಲಂಕೇಶ್ ಅವರನ್ನು ವಿಚಾರಣೆಗೊಳಪಡಿಸಿದ್ದರು. ನಾನು ಹೇಳಿದ ಮಾತಿಗೆ ಈಗಲೂ ಬದ್ಧನಾಗಿದ್ದೇನೆ.

ಜಾಲೀಸರ ವಿಚಾರಣೆಗೆ ಎಲ್ಲಾ ಸಹಕಾರ ನೀಡಿದ್ದೇನೆ. ಅಲ್ಲದೆ, ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಸೇವಿಸುವ 10-15 ಜನರ ಹೆಸರುಗಳನ್ನು ಸೂಕ್ತ ಸಾಕ್ಷಿ ಸಮೇತ ಜಾಲೀಸರಿಗೆ ನೀಡಿದ್ದೇನೆ. ನಾನು ಮೊನ್ನೆ ಹೇಳಿದ ಮಾತಿಗೆ ತಕ್ಕಂತೆ ವಿಚಾರಣೆಗೆ ಸಹಕರಿಸಿದ್ದೇನೆ ಎಂದು ಹೇಳಿದ್ದಾರೆ.

ನಿನ್ನೆಮೊನ್ನೆ ಬಂದ ನಟ-ನಟಿಯರು ಸ್ಯಾಂಡಲ್‍ವುಡ್ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಬ್ರಾಂಡ್ ಅಂಬಾಸಿಡರ್ ಆಗುತ್ತಿದ್ದಾರೆ. ಡ್ರಗ್ಸ್ ಸೇವನೆ ಮಾಡುವವರ ಹೆಸರನ್ನು ಹೇಳುವ ಮೂಲಕ ಅವರಿಗೆ ವೈಯಕ್ತಿಕವಾಗಿ ನೋವು ನೀಡಬೇಕು ಎಂಬುದು ನನ್ನ ಉದ್ದೇಶವಲ್ಲ. ಬದಲಿಗೆ ಯುವ ನಟರು, ಮಕ್ಕಳು ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಇಂದ್ರಜಿತ್ ಹೇಳಿದ್ದರು.

Facebook Comments

Sri Raghav

Admin