ಮುಂಬೈ ಗಣೇಶೋತ್ಸವದ ಮೇಲೆ ಕೊರೊನಾ ಕರಾಳ ಛಾಯೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜು.30- ಗಣೇಶೋತ್ಸವ ಆಚರಣೆಯಲ್ಲಿ ವಿಶ್ವವಿಖ್ಯಾತಿ ಪಡೆದಿರುವ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಈ ಬಾರಿ ಗಣೇಶ ಹಬ್ಬಕ್ಕೆ ಕೊರೊನಾ ವೈರಸ್ ಕರಾಳ ಛಾಯೆ ಆವರಿಸಿದೆ.

ಅಲ್ಲದೆ, ವಿನಾಯಕ ಮಹೋತ್ಸವ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದ್ದ ಗಣೇಶ ವಿಗ್ರಹ ನಿರ್ಮಿಸುವವರ ಆದಾಯಕ್ಕೆ ಭಾರೀ ಸಂಚಕಾರ ಬಂದಿದೆ.

ಕೊರೊನಾ ಸೋಂಕು ಮತ್ತು ಸಾವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಅತ್ಯಂತ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ವಿಜೃಂಭಣೆಯ ಉತ್ಸವಕ್ಕೆ ಅಡ್ಡಿಯಾಗಿದೆ.

ಪ್ರತಿ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಕೆಲವು ತಿಂಗಳುಗಳ ಮುನ್ನವೇ ಸಹಸ್ರಾರು ಮಂದಿ ಬೃಹತ್ ವಿನಾಯಕ ಮೂರ್ತಿಗಳನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗುತ್ತಿದ್ದರು. ಆದರೆ, ಈ ಬಾರಿ ಕೋವಿಡ್-19 ವೈರಸ್ ಹಾವಳಿಯಿಂದಾಗಿ ಗಣೇಶ ಮಹೋತ್ಸವಕ್ಕೆ ಅಡ್ಡಿಯಾಗಿದೆ.

ಈ ಉದ್ಯಮವನ್ನೇ ನಂಬಿಕೊಂಡಿರುವ ಸಾವಿರಾರು ಮಂದಿ ಇದರಿಂದ ಸಂಕಷ್ಟಕ್ಕೀಡಾಗಿದ್ದು, ಕೋಟ್ಯಂತರ ರೂ. ನಷ್ಟವಾಗುವ ಆತಂಕ ಎದುರಾಗಿದೆ.

Facebook Comments

Sri Raghav

Admin