ಟಿಪ್ಪು ಕುರಿತ ಹೇಳಿಕೆ ವಿಶ್ವನಾಥ್‍ರ ವೈಯಕ್ತಿಕ ಅಭಿಪ್ರಾಯ : ಗಣೇಶ್ ಕಾರ್ನಿಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.27- ವಿಧನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಟಿಪ್ಪುಸುಲ್ತಾನ್ ಕುರಿತು ಹೇಳಿಕೆ ನೀಡಿರುವುದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಹೊರತು ಇದು ಬಿಜೆಪಿ ಅಭಿಪ್ರಾಯವಲ್ಲ. ಟಿಪ್ಪು ಒಬ್ಬ ಮತಾಂಧ ಎಂಬುದಕ್ಕೆ ಪಕ್ಷ ಬದ್ಧವಾಗಿದೆ. ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಹೇಳಿದ್ದಾರೆ.

ಇತ್ತೀಚೆಗೆ ವಿಶ್ವನಾಥ್ ಅವರು ಟಿಪ್ಪು ಸುಲ್ತಾನ್ ಬಗ್ಗೆ ಕುರಿತು, ಅವರು ಸ್ವಾತಂತ್ರ್ಯದ ಸೇನಾನಿ. ಅವರು ಈ ಮಣ್ಣಿನ ಮಗ ಎಂದು ಹೇಳಿದ್ದರು. ಬಿಜೆಪಿ ಮೊದಲಿನಿಂದಲೂ ಟಿಪ್ಪು ಒಬ್ಬ ಹಿಂದೂ ವಿರೋ ಎಂದೇ ಹೇಳುತ್ತಲೇ ಬಂದಿದೆ. ಅವನು ಮತಾಂಧನಾಗಿದ್ದ ಎಂಬುದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿವೆ. ಇದಕ್ಕೆ ಪಕ್ಷ ಸಂಪೂರ್ಣ ಬದ್ದವಾಗಿದೆ ಎಂದು ಅವರು ತಿಳಿಸಿದ್ದಾರೆ.

ಟಿಪ್ಪು ಸುಲ್ತಾನ್ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುವ ಯತ್ನದಲ್ಲಿ ಕೊಡಗಿನಲ್ಲಿ ಸಹಸ್ರಾರು ಹಿಂದೂಗಳನ್ನು ಹಾಗೂ ಮಂಗಳೂರಿನಲ್ಲಿರು ಕ್ರಿಶ್ಚಿಯರನ್ನು ಮಾರಣಹೋಮ ಮಾಡಿದ್ದನ್ನು ಮರೆಯಲಾಗದು ಎಂದಿದ್ದಾರೆ.

ಟಿಪ್ಪು ಸುಲ್ತಾನ್ ಕತ್ತಿಯ ಹರಿತದಿಂದ ಜನರನ್ನು ಮತಾಂತರಗೊಳಿಸಲು ಯತ್ನಿಸಿದ್ದ ಮತ್ತು ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸು ವ ಮೂಲಕ ಕನ್ನಡ ವಿರೋಯೂ ಆಗಿದ್ದ. ಈ ಎಲ್ಲ ಕಾರಣಗಳಿಂದ ಬಿಜೆಪಿ ಎಂದಿಗೂ ಟಿಪ್ಪು ಸುಲ್ತಾನನನ್ನು ಒಳ್ಳೆಯ ಆಡಳಿತಗಾರ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಕಟುವಾಗಿ ನುಡಿದಿದ್ದಾರೆ.

Facebook Comments

Sri Raghav

Admin