ಅತಂತ್ರ ಸ್ಥಿತಿಯಲ್ಲಿರುವ ವಲಸೆ ಕಾರ್ಮಿಕರ ನೆರವಿಗೆ ಮುಂದಾದ ಕೇಂದ್ರ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.18-ಡೆಡ್ಲಿ ಕೊರೊನಾ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿ ತಮ್ಮ ಊರುಗಳಿಗೆ ಹಿಂದಿರುಗಿ ಅತಂತ್ರ ಸ್ಥಿತಿಯಲ್ಲಿರುವ ಸಹಸ್ರಾರು ವಲಸೆ ಕಾರ್ಮಿಕರ ನೆರವಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಧಾವಿಸಿದೆ.

ಅಸಂಖ್ಯಾತ ವಲಸೆ ಕಾರ್ಮಿಕರನ್ನು ಸಬಲೀಕರಣಗೊಳಿಸಲು ಮತ್ತು ಅವರ ಜೀವನೋಪಾಯಕ್ಕೆ ಆಧಾರದ ಆವಕಾಶಗಳನ್ನು ನೀಡಲು ಬೃಹತ್ ಗ್ರಾಮೀಣ ಲೋಕೋಪಯೋಗಿ ಯೋಜನೆಯೊಂದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ನವದೆಹಲಿಯಲ್ಲಿ ಜೂ.20ರಂದು ಶನಿವಾರ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಧಾನಮಂತ್ರಿ ಅವರು 50,000 ಕೋಟಿ ರೂ. ವೆಚ್ಚದ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ್ ಎಂಬ ಹೆಸರಿನ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಬಿಹಾರದ ಖಗಾರಿಯಾ ಜಿಲ್ಲೆಯ ಬೆಲ್ಡೌರ್ ತಾಲೂಕಿನ ತೆಲಿಹರ್ ಗ್ರಾಮದ ಮೂಲಕ ಈ ಯೋಜನೆ ಜಾರಿಗೆ ಬರಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸವರು. ಐದು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೆಲವು ಕೇಂದ್ರ ಸಚಿವರು ಸಹ ಅಭಿಯಾನ ಅನಾವರಣ ಸಂದರ್ಭದಲ್ಲಿ ಪಾಲ್ಗೊಳ್ಳುವರು.

ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳ ಒಟ್ಟು 116 ಜಿಲ್ಲೆಗಳಲ್ಲಿನ ತಮ್ಮ ಊರುಗಳು ಮತ್ತು ಗ್ರಾಮಗಳಿಗೆ ಹಿಂದಿರುಗಿರುವ 25,000ಕ್ಕೂ ವಲಸೆ ಕಾರ್ಮಿಕರು ಮೊದಲ ಹಂತದಲ್ಲಿ ಇ ಮಹತ್ವದ ಯೋಜನೆಗಳ ಫಲಾನುಭವ ಪಡೆಯಲಿದ್ದಾರೆ.

ಈ 116 ಜಿಲ್ಲೆಗಳಲ್ಲಿನ ತಮ್ಮ ಊರುಗಳು ಮತ್ತು ಗ್ರಾಮಗಳಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಹಿಂದಿರುಗಿದ್ದಾರೆ. ವಲಸೆ ಕಾರ್ಮಿಕರಲ್ಲಿ ಮೂರನೇ ಎರಡು ಭಾಗದಷ್ಟು ಮಂದಿ ಈ ಜಿಲ್ಲೆಗಳಲ್ಲಿ ಇದ್ದಾರೆ.

ಐದು ರಾಜ್ಯಗಳ 116 ಜಿಲ್ಲೆಗಳಲ್ಲಿನ ನೂರಾರು ಗ್ರಾಮಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದು, ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಕೃಷಿ ವಿಜ್ಞಾಣ ಕೇಂದ್ರಗಳ ಮೂಲಕ ಫಲಾನುಭವಗಳನ್ನು ಪಡೆಯಲಿದ್ಧಾರೆ.

ಕೊರೊನಾ ಹಾವಳಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ಡುಕೊಳ್ಳುವಿಕೆ ನಿಯಮವನ್ನು ಈ ಅಭಿಯಾನದಲ್ಲಿ ಪಾಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಅಭಿಯಾನವು 125 ದಿನಗಳ ಅವಧಿಯನ್ನು ಒಳಗೊಂಡಿದ್ದು, ಯೋಜನೆ ಆಧಾರದ ಮೇಲೆ ಜಾರಿಗೆ ಬರಲಿದೆ. ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ನೀಡಲು 25 ವಿವಿಧ ರೀತಿಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

ಒಂದೆಡೆ ಬೃಹತ್ ಗ್ರಾಮೀಣ ಲೋಕೋಪಯೋಗಿ ಯೋಜನೆ ಜಾ ರಿ, ಮತ್ತೊಂದಡೆ ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶ ಮತ್ತು ಜೀವನೋಪಾಯದ ಸಬಲೀಕರಣ ಹಾಗೂ ಇನ್ನೊಂದೆಡೆ ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ಮೂಲಸೌಕರ್ಯಾಭಿವೃದ್ದಿ ಸೃಷ್ಟಿಗೆ ಇದರಿಂದ ಸಹಕಾರಿಯಾಗಲಿದೆ. ಈ ಅಭಿಯಾನಕ್ಕಾಗಿ 50,000 ಕೋಟಿ ರೂ.ಗಳ ಸಂಪನ್ಮೂಲವನ್ನು ಮೀಸಲಿಡಲಾಗಿದೆ.

ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್, ರಸ್ತೆ ಸಾರಿಗೆಗಳು ಮತ್ತು ಹೆದ್ದಾರಿಗಳು, ಗಣಿಗಳು, ಕುಡಿಯುವ ನೀರು, ಮತ್ತು ನೈರ್ಮಲೀಕರಣ, ಪರಿಸರ, ರೈಲ್ವೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ನವ ಮತ್ತು ನವೀಕರಿಸಬಹುದಾದ ಇಂಧನ, ಗಡಿ ರಸ್ತೆಗಳು, ದೂರಸಂಪರ್ಕ ಮತ್ತು ಕೃಷಿ ಸೇರಿದಂತೆ 12 ವಿವಿಧ ಸಚಿವಾಲಯಗಳು ಈ ಅಭಿಯಾನಕ್ಕೆ ಸಮನ್ವಯ ನೀಡಲಿದೆ.

Facebook Comments