ಗಾರ್ಮೆಂಟ್ಸ್ ವಾಹನ ಪಲ್ಟಿ : 30ಕ್ಕೂ ಹೆಚ್ಚುಮಹಿಳಾ ಸಿಬ್ಬಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಅ.3- ಗಾರ್ಮೆಂಟ್ಸ್ ಮಹಿಳಾ ಸಿಬ್ಬಂದಿ ತೆರಳುತ್ತಿದ್ದ ವಾಹನ ಪಲ್ಟಿ ಹೊಡೆದ ಪರಿಣಾಮ 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಸೋಮನಹಳ್ಳಿ ಗಿರೀಶ್ ಎಕ್ಸ್‍ಪೋರ್ಟ್ ಗಾರ್ಮೆಂಟ್ಸ್‍ಗೆ ಸೇರಿದ ವಾಹನವು ಸುತ್ತ-ಮುತ್ತಲಿನ ಮಹಿಳಾ ಸಿಬ್ಬಂದಿಯನ್ನು ಕೆಲಸಕ್ಕೆಂದು ವಾಹನದಲ್ಲಿ ಕರೆದೊಯ್ಯುತ್ತಿತ್ತು.

ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ. ತಾಲೂಕಿನ ಹಾಗಲಹಳ್ಳಿ ಬಳಿ ವಾಹನ ಪಲ್ಟಿ ಹೊಡೆದು ರಸ್ತೆ ಬದಿಯವ ಜಮೀನಿಗೆ ಉರುಳಿ ಬಿದ್ದಿದೆ.  ವಾಹನದಲ್ಲಿದ್ದ 30ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸಣ್ಣಪಟ್ಟು ಗಾಯಾಳುಗಳಿಗೆ ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಗಂಭೀರ ಗಾಯಗೊಂಡವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments