ಅಡುಗೆ ಅನಿಲ ದರದಲ್ಲಿ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.12- ಅಡುಗೆ ಅನಿಲ ಎಲ್‍ಪಿಜಿ ದರದಲ್ಲಿ ಇಂದು ಭಾರೀ ಏರಿಕೆ ಕಂಡುಬಂದಿದ್ದು, ಪ್ರತಿ ಸಿಲಿಂಡರ್‍ಗೆ 144.5ರಷ್ಟು ಹೆಚ್ಚಳವಾಗಿದೆ.  ಜಾಗತಿಕ ದರದಲ್ಲಿ ಏರಿಕೆಯಿಂದಾಗಿ ಈ ಹೆಚ್ಚಳ ಕಂಡುಬಂದಿದೆ.

ಆದರೆ, ಜನಸಾಮಾನ್ಯರು ಬಳಸುವ ಅಡುಗೆ ಅನಿಲದ ಮೇಲೆ ಕೇಂದ್ರ ಸರ್ಕಾರ ಸಬ್ಸಿಡಿಯನ್ನು ಬಹುತೇಕ ಇಮ್ಮಡಿಗೊಳಿಸಿರುವುದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. ಎಲ್‍ಪಿಜಿ ಸಿಲಿಂಡರ್ ದರ ಸದ್ಯಕ್ಕೆ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ.14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಈ ಹಿಂದೆ ಇದ್ದ 714ರೂ.ಗಳಿಂದ 858.50ರೂ.ಗಳಿಗೆ ಹೆಚ್ಚಿಸಲಾಗಿದೆ.

Facebook Comments