ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಅಂಡ್ ಸಿಂಗಲ್ ಪರಿಹಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಈಗಿನ ಜೀವನಶೈಲಿ ಒತ್ತಡದ ಬದುಕು ಹಾಗೂ ತಿನ್ನೋ ಆಹಾರದಿಂದ ಸಾಮಾನ್ಯವಾಗಿ ಯಾರನ್ನೇ ಕೇಳಿದರೂ ‘ಹೊಟ್ಟೆಯಲ್ಲಿ ಉರಿ ಆದಂತಾಗುತ್ತದೆ, ಎದೆ ಉರಿ ಆದಂತಾಗುತ್ತದೆ, ಹುಳಿತೇಗು ಬರುತ್ತೆ, ತಲೆನೋವು ಬರುತ್ತೆ, ಅರ್ಧತಲೆನೋವು ಬರುತ್ತೆ’ – ಎಂದೆಲ್ಲ ಹೇಳುತ್ತಾರೆ. ಸಮಸ್ಯೆ ಎಂದರೆ ಗ್ಯಾಸ್ಟ್ರಿಕ್. ಇದಕ್ಕೆ ಸಿಂಪಲ್ ಮನೆ ಮದ್ದುಗಳಿವೆ

ನಾವು ಸೇವಿಸಿದ ಆಹಾರವನ್ನು ಪಚನ ಮಾಡಲು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದರಿಂದ ಮುಂದೆ ಸಣ್ಣ ಕರುಳು, ಯಕೃತ್ತು ಸ್ರವಿಸುವ ರಸಗಳು ಪಚನವನ್ನು ಮುಂದುವರಿಸುತ್ತವೆ. ಊಟದಲ್ಲಿರುವ ಸಾರಾಂಶವನ್ನು ದೇಹಕ್ಕೆ ಹೀರಿಕೊಂಡು, ತ್ಯಾಜ್ಯ ವಸ್ತುವನ್ನು ಮುಂದೆ ತಳ್ಳುತ್ತವೆ.

ಮತ್ತೆ ದೊಡ್ಡ ಕರುಳಿನ ಗ್ರಂಥಿಗಳು ತ್ಯಾಜ್ಯ ವಸ್ತುವಿನಲ್ಲಿನ ನೀರಿನಾಂಶವನ್ನು ಹೀರಿಕೊಂಡು ಮಲವನ್ನು ಗಟ್ಟಿಗೊಳಿಸುತ್ತವೆ. ಇದು ಸಕಾಲಿಕವಾಗಿ ದೇಹದಿಂದ ಹೊರಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಸ್ರವಿಸುವ ರಸಗಳ ಪ್ರಮಾಣ, ಅಂಗಗಳ ಒಳಗೋಡೆಯ ಸಾಮರ್ಥ್ಯ, ಆಹಾರವನ್ನು ಮುಂದೆ ತಳ್ಳುವ ಕ್ಷಮತೆ ಮತ್ತು ಇವುಗಳಿಗೆ ಪೂರಕವಾಗಿರುವ ನರತಂತುಗಳ ಹೊಂದಾಣಿಕೆ ಅತಿ ಮುಖ್ಯ.

ಹಸಿಶುಂಠಿಯಲ್ಲಿ ಒಂದು ವಿಶೇಷ ಅಂಶವಿದೆ. ಅದು ಎಚ್ ಫೈಲೊರಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆದು ಹೈಪರ್ ಅಸಿಡಿಟಿಯ ಮೂಲಕಾರಣಕ್ಕೆ ಚಿಕಿತ್ಸೆ ಕೊಡುತ್ತದೆ. ಹಾಗೆಯೇ ಬೂದುಗುಂಬಳಕಾಯಿಯು ಕ್ಷಾರೀಯ (ಅಲ್ಕಲೈನ್) ಪದಾರ್ಥವಾಗಿದ್ದು, ಇದರ ಜ್ಯೂಸ್ ಹೊಟ್ಟೆಯಲ್ಲಿರುವಂತಹ ಹೆಚ್ಚಾದ ಆಮ್ಲೀಯತೆಯನ್ನು ಕ್ಷಾರೀಯವಾಗಿ ಮಾರ್ಪಡಿಸುವ ಶಕ್ತಿಯನ್ನು ಹೊಂದಿದೆ.

ಯಾರಿಗೆ ಅಸಿಡಿಟಿ, ಗ್ಯಾಸ್ಟ್ರಿಕ್, ಹುಳಿತೇಗು, ಹೊಟ್ಟೆಯುಬ್ಬರ, ತಲೆನೋವು, ಅರ್ಧ ತಲೆನೋವು ಇದೆಯೋ ಅವರೆಲ್ಲ ಆಹಾರಸೇವನೆಗಿಂತ 10-15 ನಿಮಿಷ ಮುಂಚೆ ಒಂದು ತುಂಡು ಬೂದುಗುಂಬಳಕಾಯಿ, ಎರಡು ಇಂಚಿನಷ್ಟು ಹಸಿ ಶುಂಠಿ ಹಾಗೂ ನೀರು ಸೇರಿಸಿ 250 ಮಿಲಿ ಜ್ಯೂಸ್ ಮಾಡಿಕೊಂಡು ಪ್ರತಿನಿತ್ಯ ಎರಡು ಬಾರಿ ಕುಡಿಯಬೇಕು. ಇದರಿಂದ ಮೂರು ತಿಂಗಳಲ್ಲಿ ಅಸಿಡಿಟಿ ಸಂಪೂರ್ಣ ಕಡಿಮೆಯಾಗಲು ಸಾಧ್ಯ.

ಇದು ತೂಕ ಕಡಿಮೆ ಮಾಡಿಕೊಳ್ಳಲು ಅನುಕೂಲಕಾರಿ. ಜೊತೆಗೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಸರಿಯಾಗಿ ಹಸಿವೆ, ಜೀರ್ಣಕ್ರಿಯೆ ಆಗುತ್ತದೆ. ಬೂದುಗುಂಬಳಕಾಯಿ ಹಾಗೂ ಹಸಿ ಶುಂಠಿ ಜ್ಯೂಸ್ ಸೇವಿಸಿ ನೂರಾರು ಜನ ಅಸಿಡಿಟಿ, ಗ್ಯಾಸ್ಟ್ರಿಕ್ ನಿವಾರಿಸಿಕೊಂಡಿದ್ದಾರೆ.

Facebook Comments