ಆಸ್ಪತ್ರೆಗಳಿಗೆ ಬಿಬಿಎಂಪಿ ಆಯುಕರ ಧೀಡಿರ್ ಭೇಟಿ, 5 ಪ್ರಮುಖ ಆಸ್ಪತ್ರೆಗಳಿಗೆ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50‌ರಷ್ಟು ಹಾಸಿಹೆ ಮೀಸಲಿರಿಸಿರುವ ಸಂಬಂಧ ಮಾನ್ಯ ಮುಖ್ಯ ಆಯುಕ್ತರು ರವರು ಪ್ರಮುಖ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ವಲಯ ಆಯುಕ್ತರು‌ ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಏರಿಕೆಯಾಗುತ್ತಿದ್ದು, ಸರ್ಕಾರದ ಆದೇಶದಂತೆ ಸೋಂಕಿತರ ಚಿಕಿತ್ಸೆಗಾಗಿ ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆಯೆ, ಇಲ್ಲವೇ ಎಂಬುದನ್ನು ತಿಳಿಯಲು ಮುಖ್ಯ ಆಯುಕ್ತರು ರವರು ಇಂದು ವಿಕ್ರಂ, ಪೋರ್ಟಿಸ್, ಆಸ್ಟರ್ ಸಿಎಂಐ, ಕೊಲಂಬಿಯಾ ಏಷಿಯಾ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಯಾವ ಆಸ್ಪತ್ರೆಯಲ್ಲು ಶೇ. 50 ಹಾಸಿಗೆಗಳನ್ನು ಮೀಸಲಿಡದ ಪರಿಣಾಮ 5 ಆಸ್ಪತ್ರೆಗಳಿಗೆ ಕಾರಣ ಕೇಳುವ ನೋಟೀಸ್ ನೀಡಿ 24 ಗಂಟೆಯೊಳಗಾಗಿ ಸಮಜಾಯಿಷಿ ನೀಡುವಂತೆ ತಿಳಿಸಲಾಗಿರುತ್ತದೆ. ಹಾಸಿಗೆ ನೀಡದಿದ್ದರೆ ಕೆಪಿಎಂಇ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಲಾಗಿರುತ್ತದೆ.

# ವಿಕ್ರಂ ಮತ್ತು ಫೋರ್ಟಿಸ್ ಕನ್ನಿಂಗ್ ಹ್ಯಾಂ ರಸ್ತೆ ಆಸ್ಪತ್ರೆ:
ವಿಕ್ರಂ ಆಸ್ಪತ್ರೆಯಲ್ಲಿ 39 ಹಾಸಿಗೆಗಳು ಹಾಗೂ ಪೋರ್ಟಿಸ್ ಆಸ್ಪತ್ರೆಯಲ್ಲಿ 30 ಹಾಸಿಗೆಗಳು ಮೀಸಲಿಡಬೇಕಿರುತ್ತದೆ. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಟ್ಟಿರುವ ಸಂಖ್ಯೆಯ ಸೂಚನಾ ಫಲಕವನ್ನು ಪ್ರವೇಶದ್ವಾರದ ಮುಂದೆ ಅಳವಡಿಸಿರಬೇಕಾಗಿರುತ್ತದೆ. ಸರಿಯಾದ ಮಾಹಿತಿ ನೀಡದ ಹಾಗೂ ಸರ್ಕಾರದ ಆದೇಶವನ್ನು ಪಾಲಿಸದ ಕಾರಣ ಎರಡು ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿರುತ್ತದೆ.

# ಆಸ್ಟರ್ ಆಸ್ಪತ್ರೆ:
ಆಸ್ಟರ್ ಸಿ.ಎಂ.ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ಸದರಿ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶದಂತೆ ಇನ್ನೂ ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲಿಡದ ಕಾರಣ ಸ್ಥಳದಲ್ಲೇ ಮುಖ್ಯ ಆಯುಕ್ತರು ರವರು ಕಾರಣ ಕೇಳಿ‌ ನೋಟೀಸ್ ನೀಡಿ 24 ಗಂಟೆಯೊಳಗಾಗಿ ಉತ್ತರ ನೀಡಲು ತಿಳಿಸಲಾಗಿರುತ್ತದೆ. ಉತ್ತರ ನೀಡದಿದ್ದಲ್ಲಿ ಒಪಿಸಿ ಮುಚ್ಚುವುದಾಗಿ ಸೂಚನೆ ನೀಡಲಾಗಿರುತ್ತದೆ.

ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶದ ಪ್ರಕಾರ 112 ಹಾಸಿಗೆಗಳನ್ನು ಮೀಸಲಿಡಬೇಕಿರುತ್ತದೆ. ಆದರೆ ಶೇ. 20 ರಂತೆ ಸಾಮಾನ್ಯ, ಐಸಿಯು, ವೆಂಟಿಲೇಟರ್ ಸೇರಿ 45 ಹಾಸಿಗೆಗಳನ್ನು ಮಾತ್ರ ಮೀಸಲಿಟ್ಟಿರುತ್ತಾರೆ. ಕೋವಿಡ್ ಸೋಂಕಿತರಿಗಾಗಿ ಶೇ. 50 ರಷ್ಟು ಹಾಸಿಗೆ ಮೀಸಲಿಡಬೇಕೆಂದು ಈಗಾಗಲೇ ಒಮ್ಮೆ ನೋಟೀಸ್ ಜಾರಿ ಮಾಡಲಾಗಿತ್ತು. ಆದರೂ ಇನ್ನೂ ಮೀಸಲಿಡದ ಕಾರಣ ಇಂದು ಕಾರಣ ಕೇಳಿ ನೋಟೀಸ್ ನೀಡಿ, ಕೂಡಲೆ ಶೇ. 50 ರಷ್ಟು ಹಾಸಿಗೆ ಮೀಸಲಿಡಲು ಆಸ್ಪತ್ರೆಗೆ ಸೂಚನೆ ನೀಡಲಾಗಿರುತ್ತದೆ.

# ಕೋಲಂಬಿಯಾ ಎಷಿಯಾ ಆಸ್ಪತ್ರೆ ಬಳ್ಳಾರಿ ರಸ್ತೆ
ತದನಂತರ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ಸರ್ಕಾರದ ಆದೇಶದಂತೆ 30 ಹಾಸಿಗೆ ಮೀಸಲಿಡಬೇಕಿರುತ್ತದೆ. ಆದರೆ ಇನ್ನೂ 15 ಹಾಸಿಗೆ ಮಾತ್ರ ಮೀಸಲಿಡಲಾಗಿರುತ್ತದೆ. ಆದ್ದರಿಂದ ಇನ್ನು 24 ಗಂಟೆಯಲ್ಲಿ ಮೀಸಲಿರಿಸಬೇಕಿರುವ ಹಾಸಿಗೆಯನ್ನು ಮೀಸಲಿಡಬೇಕೆಂದು ಕಾರಣ ಕೇಳುವ ನೋಟೀಸ್ ನೀಡಲಾಗಿರುತ್ತದೆ‌‌.

# ಬ್ಯಾಪ್ಟಿಸ್ಟ್ ಆಸ್ಪತ್ರೆ
ಕೊನೆಯದಾಗಿ ಬ್ಯಾಪ್ಟಿಸ್ಟ್ ಆಸ್ಪತ್ತೆ ಭೇಟಿ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, 124 ಹಾಸಿಗೆಗಳ ಪೈಕಿ 63 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿರುತ್ತದೆ. ಈ ಪೈಕಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೂ ಕಾರಣ ಕೇಳುವ ನೋಟೀಸ್ ನೀಡಿ 24 ಗಂಟೆಯೊಳಗಾಗಿ ಉತ್ತರ ನೀಡುವಂತೆ ತಿಳಿಸಿ ಹಾಸಿಗೆ ಮೀಸಲಿಡದಿದ್ದರೆ ಒಪಿಸಿ ಬಂದ್ ಮಾಡುವುದಾಗಿ ಸೂಚನೆ ನೀಡಲಾಗಿರುತ್ತದೆ.

# ಮಾನ್ಯ ಮುಖ್ಯ ಆಯುಕ್ತರು ರವರಿಂದ ಎಚ್ಚರಿಕೆ
ತಪಾಸಣೆ ಮುಗಿಸಿದ ನಂತರ ಮಾನ್ಯ ಮುಖ್ಯ ಆಯುಕ್ತರು ರವರು ಮಾತನಾಡುತ್ತಾ ಆಸ್ಪತ್ರೆಗಳು ವ್ಯವಸ್ಥೆಯನ್ನು ಜರೂರಾಗಿ 24 ತಾಸಿನ ಒಳಗೆ ಸರಿಪಡಿಸಿ ಕೊಳ್ಳುವಂತೆ ಇಲ್ಕದಿದ್ದರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಹಾಗೂ ಅಧಿಕಾರಿಗಳು ಸಹ ಈ ಬಗ್ಗೆಜರೂರು ಕ್ರಮವಹಿಸಲು ಸೂಚಿಸಲಾಗಿದೆ. ಅಲ್ಲದೇ ಇಂದು ಸಾಂಕೇತಿಕವಾಗಿ 5 ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಲಾಗಿದೆ, ಮುಂದಿನ ದಿನದಲ್ಲಿ ಧೀಡರ್ ಆಗಿ ಯಾವುದೇ ಆಸ್ಪತ್ರೆಗೆ ಅನೀರಿಕ್ಷಿತವಾಗಿ ತಪಾಸಣೆ ನೀಡಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

Facebook Comments

Sri Raghav

Admin