ಗೌರಿ ಹತ್ಯೆಗೆ ‘ಅಮ್ಮಾ ಆಪರೇಷನ್’..!

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh--012
ಬೆಂಗಳೂರು,ಜೂ.16-ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಗೈಯ್ಯಲು ಆರೋಪಿಗಳು ಅಮ್ಮಾ ಆಪರೇಷನ್ ಎಂಬ ಹೆಸರನಡಿ ಕಾರ್ಯಾಚರಣೆ ನಡೆಸಿರುವುದನ್ನು ವಿಶೇಷ ತನಿಖಾ ದಳ(ಎಸ್‍ಐಟಿ)ಪತ್ತೆಹಚ್ಚಿದೆ. ಗೌರಿಯನ್ನು ಹತ್ಯೆ ಮಾಡಲು ಗುಪ್ತವಾದ ಸಂಕೇತದ ಮೂಲಕ ಕನ್ನಡ, ಮರಾಠಿ, ಹಿಂದಿ , ತೆಲುಗು ಭಾಷೆಗಳಲ್ಲಿ ಆರೋಪಿಗಳು ಮಾತನಾಡಿ ಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಸುಮಾರು ಒಂದು ವರ್ಷಗಳ ಕಾಲ ಕಾಯಿನ್ ಬೂತ್‍ಗಳಲ್ಲಿ ಮಾತನಾಡಿಕೊಳ್ಳುತ್ತಿದ್ದ ಇವರು, ತಮ್ಮ ಸಂಭಾಷಣೆಯಲ್ಲಿ ಅಪ್ಪಿತಪ್ಪಿಯೂ ಕೊಲೆ ಮಾಡಬೇಕಾದ ವ್ಯಕ್ತಿಯ ಹೆಸರನ್ನು ಬಾಯ್ಬಿಟ್ಟಿರಲಿಲ್ಲ. ಕೇವಲ ಗುಪ್ತ ಸಂಕೇತಗಳು ಹಾಗೂ ಅಮ್ಮ ಆಪರೇಷನ್ ಎಂದಷ್ಟೇ ಮಾತನಾಡುತ್ತಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.

Gauri-Lankesh

ಸುಮಾರು 9 ತಿಂಗಳ ನಂತರ ಈ ಪ್ರಕರಣವನ್ನು ಬೇ„ಸಿರುವ ಎಸ್‍ಐಟಿ ಅ„ಕಾರಿಗಳು ಕೊನೆಗೂ ಪ್ರಮುಖ ಆರೋಪಿಗಳನ್ನು ಬಂ„ಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜಾಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಪರಶುರಾಮ್ ವಾಘ್ಮೋರೆ ಈ ಪ್ರಕರಣದ ಪ್ರಮುಖ ರೂವಾರಿಯಾಗಿದ್ದಾನೆ.ಉಳಿದಂತೆ ಇತರೆ ಮೂವರು ಆರೋಪಿಗಳು ಈ ಕೊಲೆಗೆ ಸಂಚು ರೂಪಿಸಿರುವುದು ಈ ತನಿಖೆಯಿಂದ ಸಾಬೀತಾಗಿದೆ.

ಯಾರೆಂದು ಗೊತ್ತಿರಲಿಲ್ಲ:
ಎಸ್‍ಐಟಿ ವಶದಲ್ಲಿರುವ ಪರಶುರಾಮ್ ವಾಘ್ಮೋರೆ ಅ„ಕಾರಿಗಳ ಮುಂದೆ ಬಾಯ್ಬಿಟ್ಟಿರುವಂತೆ ನನಗೆ ಗೌರಿ ಲಂಕೇಶ್ ಯಾರೆಂಬುದೇ ತಿಳಿದಿರಲಿಲ್ಲ. ಅವರು ವಾರಪತ್ರಿಕೆಯ ಸಂಪಾದಕರೆಂಬುದಾಗಲಿ ಇಲ್ಲವೆ ಎಡಪಂಥೀಯ ಚಿಂತಕರು ಎಂಬುದು ನನಗೆ ಗೊತ್ತಿಲ್ಲ. ನಾನು ಯಾವಾಗಲೂ ಹಿಂದೂ ಧರ್ಮವನ್ನು ನಂಬುತ್ತಿದ್ದೆ. ನನಗೆ ನನ್ನ ಧರ್ಮವನ್ನು ಅತಿಯಾಗಿ ಟೀಕಿಸಿದರೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಬಂದು ಪ್ರಮುಖರೊಬ್ಬರನ್ನು ಕೊಲೆ ಮಾಡಬೇಕೆಂದು ಪ್ರಸ್ತಾಪ ಮುಂದಿಟ್ಟ.

Gauru-Lankesh-Dead

ಪ್ರಾರಂಭದಲ್ಲಿ ನಾನು ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಆದರೆ ಗೌರಿ ಲಂಕೇಶ್ ಹಿಂದೂ ಧರ್ಮದ ಬಗ್ಗೆ ಬರೆದಿರುವ ಅವಹೇಳನಕಾರಿ ಅಂಕಣಗಳು ಹಾಗೂ ಸಭೆ-ಸಮಾರಂಭಗಳಲ್ಲಿ ನಮ್ಮ ಆಚಾರ-ವಿಚಾರ ಕುರಿತು ಮಾತನಾಡಿರುವ ಟೀಕೆಗಳಿಂದ ಅವರನ್ನು ಅಂದೇ ಕೊಲೆ ಮಾಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾಗಿ ವಾಘ್ಮೋರೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಬ್ರೇನ್ ವಾಷ್ ಮಾಡಿದರು:

Gauri-Lankesh--03
ಹಿಂದೂ ಧರ್ಮವನ್ನು ಪ್ರೀತಿಸುತ್ತೀಯಾ ಹಾಗಾಗಿ ನಿನಗೆ ದೇವರೇ ಈ ಅವಕಾಶ ಕೊಟ್ಟಿದ್ದಾರೆ ಇದನ್ನು ಸದುಪಯೋಗ ಪಡಿಸಿಕೊ. ನಿನ್ನ ಧರ್ಮದ ವಿರುದ್ಧ ಮಾತನಾಡುವವರನ್ನು ಬಿಡಬೇಡ. ನೀನು ಕಾರ್ಯ ಮಾಡಲು ತಯಾರಾದರೆ ನಾನು ನಿನ್ನನ್ನು ಸಜ್ಜುಗೊಳಿಸುತ್ತೇನೆ ಎಂದು ವ್ಯಕ್ತಿಯೊಬ್ಬ ಪರಶುರಾಮ್ ವಾಘ್ಮೋರೆಗೆ ಬ್ರೇನ್ ವಾಷ್ ಮಾಡಿದ್ದನಂತೆ.

ಏರ್‍ಗನ್‍ನಿಂದ ತರಬೇತಿ, 500 ಸುತ್ತು ಗುಂಡು:
ಗೌರಿ ಅವರನ್ನು ಹತ್ಯೆ ಮಾಡುತ್ತೇನೆ ಎಂದಾದ ಮೇಲೆ ಆ ವ್ಯಕ್ತಿಯೇ ನನಗೆ ಗುಂಡು ಹಾರಿಸುವುದನ್ನು ಹೇಳಿಕೊಟ್ಟ. ಬೆಳಗಾವಿಯ ನಿರ್ಜನ ಪ್ರದೇಶದಲ್ಲಿ ಏರ್‍ಗನ್‍ನಲ್ಲಿ ನನಗೆ ತರಬೇತಿ ಕೊಟ್ಟು. ತರಬೇತಿಯ 20 ದಿನಗಳಲ್ಲಿ ಸುಮಾರು 500 ಸುತ್ತು ಗುಂಡು ಹಾರಿಸಿದೆ ಎಂದಿದ್ದಾನೆ ಪರಶುರಾಮ್ ವಿಚಾರಣೆ ವೇಳೆ ತಿಳಿಸಿದ್ದಾನೆ.

Gauri-Lankesh--01

ಕಾಯಿನ್ ಬೂತ್‍ನಲ್ಲಿ ಚರ್ಚೆ:
ತರಬೇತಿ ನಂತರ ಆ ವ್ಯಕ್ತಿಯೇ ಕೊಟ್ಟಿದ್ದ ಮೊಬೈಲ್ ಸಂಖ್ಯೆಗೆ ಕಾಯಿನ್ ಬೂತ್‍ನಿಂದ ಕರೆ ಮಾಡಿದ್ದ ಪರಶುರಾಮ್ ಕೊಲೆಯ ರೂಪುರೇಷೆಗಳನ್ನು ತಿಳಿದುಕೊಂಡ. ಕರೆ ಸ್ವೀಕರಿಸುತ್ತಿದ್ದ ವ್ಯಕ್ತಿಯ ಸೂಚನೆಯಂತೆ ಸೆಪ್ಟೆಂಬರ್ 3ಕ್ಕೆ ಬೆಂಗಳೂರಿಗೆ ತೆರಳಿ ಸುಂಕದಕಟ್ಟೆಯ ಮನೆಯೊಂದರಲ್ಲಿ ಉಳಿದುಕೊಂಡ. ಅದೇ ಮನೆಯಲ್ಲಿ ಸುಜಿತ್ ಅಲಿಯಾಸ್ ಪ್ರವೀಣ್ ಕೂಡ ಇದ್ದ. ಸೆಪ್ಟೆಂಬರ್ 4ರಂದೇ ಗೌರಿ ಲಂಕೇಶ್‍ರನ್ನು ಕೊಲ್ಲಲು ಯೋಜನೆ ರೂಪಿಸಲಾಗಿತ್ತು ಆದರೆ ಅಂದು ಗೌರಿ ಲಂಕೇಶ್ ಬೇಗನೆ ಬಂದು ಮನೆಯೊಳ್ಳಕ್ಕೆ ಹೋದ ಕಾರಣ ಅಂದು ಕೊಲೆ ಸಾಧ್ಯವಾಗಿರಲಿಲ್ಲ. ಆದರೆ ಸೆಪ್ಟೆಂಬರ್ 5ರಂದು ಬೇಗನೇ ಬಂದು ಅಲ್ಲೇ ಪಾರ್ಕ್ ಒಂದರಲ್ಲಿ ಅಡಗಿ ಕೂತಿದ್ದ ಹಂತಕರು ಗೌರಿ ಕಾರು ಹಿಂಬಾಲಿಸಿಕೊಂಡು ಬಂದು ಗೌರಿ ಮನೆ ಬಾಗಿಲಲ್ಲೇ ಹತ್ಯೆ ಮಾಡಿದ್ದರು.

Gauri-Lankesh--02

Facebook Comments

Sri Raghav

Admin