ಗೌರಿ ಹಂತಕ ಶಾರ್ಪ್ ಶೂಟರ್ ಪತ್ತೆಗಾಗಿ ಎಸ್‍ಐಟಿ ಹರಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh

ಬೆಂಗಳೂರು, ಜೂ.8- ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿರುವ ಶಾರ್ಪ್‍ಶೂಟರ್‍ನನ್ನು ಪತ್ತೆಹಚ್ಚಲು ಎಸ್‍ಐಟಿ ಹರಸಾಹಸ ಪಡುತ್ತಿದೆ. ಇದುವರೆಗೂ ಎಸ್‍ಐಟಿ ನಡೆಸಿದ ತನಿಖೆ, ವಿಚಾರಣೆ ಹಾಗೂ ಸಂಗ್ರಹಿಸಿದ ಮಾಹಿತಿಗಳಿಂದ ಹಲವು ಮಹತ್ವದ ವಿಷಯಗಳು ತಿಳಿದುಬಂದಿವೆಯಾದರೂ ಸಹ ಶೂಟರ್ ಯಾರೆಂಬುದು ಪತ್ತೆಯಾಗಿಲ್ಲ.  ಶಸ್ತ್ರಾಸ್ತ್ರ ಅಕ್ರಮ ಮಾರಾಟ ಪ್ರಕರಣದಲ್ಲಿ ಬಂಧಿತರಾಗಿರುವ ನವೀನ್‍ಕುಮಾರ್ ಹಾಗೂ ಸಾಹಿತಿ ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿತವಾಗಿರುವ ನಾಲ್ವರು ಆರೋಪಿಗಳನ್ನು ಎಸ್‍ಐಟಿ ವಶಕ್ಕೆ ತೆಗೆದುಕೊಂಡು ತೀವ್ರವಾಗಿ ವಿಚಾರಣೆ ನಡೆಸಿದೆಯಾದರೂ ಶೂಟರ್ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಗೌರಿ ಹತ್ಯೆಗೆ ಗುಂಡುಗಳನ್ನು ಯಾರು, ಯಾರಿಂದ, ಎಲ್ಲಿ ಖರೀದಿಸಿದ್ದಾರೆ ಎಂಬ ಮಾಹಿತಿಯನ್ನು ಎಸ್‍ಐಟಿ ಪತ್ತೆಹಚ್ಚಿದೆ. ಅಲ್ಲದೆ, ಗೌರಿ ಅವರ ಹತ್ಯೆಗೆ ಎಲ್ಲೆಲ್ಲಿ, ಯಾರ್ಯಾರು ಸೇರಿಕೊಂಡು ಸಭೆ ನಡೆಸಿ ಸಂಚು ಮಾಡಿದ್ದಾರೆಂಬುದನ್ನು ಸಹ ಎಸ್‍ಐಟಿ ಮಾಹಿತಿ ಕಲೆ ಹಾಕಿದೆಯಲ್ಲದೆ ಗೌರಿ ಹತ್ಯೆಗೆ ಕಾರಣವೇನೆಂಬುದನ್ನು ಸಹ ಪತ್ತೆಹಚ್ಚಿದೆ. ಆದರೂ ಸಹ ಗೌರಿ ಹತ್ಯೆಯ ಪ್ರಮುಖ ಆರೋಪಿ, ಶಾರ್ಪ್‍ಶೂಟರ್ ಯಾರೆಂಬುದು ನಿಖರವಾಗಿ ತಿಳಿದುಬಂದಿಲ್ಲ. ಶಾರ್ಪ್‍ಶೂಟರ್ ಪತ್ತೆಗಾಗಿ ಎಸ್‍ಐಟಿ ಹರಸಾಹಸ ಪಡುತ್ತಿದೆ.

Facebook Comments

Sri Raghav

Admin