ವಾಂಗೀಬಾತ್ ಅಂತೀರಾ..ಬದನೆಕಾಯಿ ಎಲ್ಲಿ…? ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕರಿಗೆ ಶಾಸಕರ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು,ಸೆ.10- ಏನ್ರೀ..ವಾಂಗೀಬಾತ್ ಅಂತೀರಾ..ಕಾರದ ಪುಡಿಯ ಅನ್ನ ಇದ್ದಂಗಿದೆ.. ಯಾರಾದ್ರೂ ಇದನ್ನು ವಾಂಗೀಬಾತ್ ಅಂತಾರಾ..ಬದನೆಕಾಯಿ ಎಲ್ಲಿ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ನಗರದ ಇಂದಿರಾ ಕ್ಯಾಂಟೀನ್ ದಿಡೀರ್ ಬೇಟಿ ನೀಡಿ ವಾಂಗೀಬಾತ್ ಸೇವಸಿ ಇಂದಿರಾ ಕ್ಯಾಂಟಿನ್ ಅಡುಗೆಯವರ ಮೇಲೆ ಕೆಂಡಮಂಡಲರಾದರು.

ನಗರದ ಇಂದಿರಾ ಕ್ಯಾಂಟಿನ್‍ಗೆ ದಿಡೀರ್ ಬೇಟಿ ನೀಡಿದ ಶಾಸಕರು ಅಲ್ಲಿನ ತಿಂಡಿ ಊಟದ ಅವ್ಯವಸ್ಥೆಯನ್ನು ನೋಡಿ ಬಡವರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ಒದಗಿಸಬೇಕೆಂಬ ಏಕೈಕ ಉದ್ದೇಶದಿಂದ ಪ್ರಾರಂಭಗೊಂಡ ಇಂದಿರಾ ಕ್ಯಾಂಟಿನ್ ತೆರೆದಿದ್ದು, ಆದರೆ ಕ್ಯಾಂಟಿನ್ ವ್ಯವಸ್ಥಾಪಕರ ಹಾಗೂ ಸಹಾಯಕರ ನಿರ್ಲಕ್ಷತನದಿಂದ ತಿಂಡಿ ಊಟ ರುಚಿಯಿಲ್ಲದೆ ಗ್ರಾಹಕರು ಇತ್ತಕಡೆ ತಿರುಗಿಯೂ ನೋಡದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ, ಕ್ಯಾಂಟೀನ್ ನಲ್ಲಿ ತಿಂಡಿ ಊಟ ರುಚಿಕರವಾಗಿರಬೇಕು ಜತೆಗೆ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು ನಿಗದಿತ ವೇಳಾಪಟ್ಟಿಯಂತೆ ಆಹಾರ ಪದಾರ್ಥಗಳನ್ನು ನೀಡಬೇಕು ಮತ್ತೊಂಮ್ಮೆ ದೂರು ಕೇಳಿಬಂದಲ್ಲಿ ನಿಮ್ಮ ಗುತ್ತಿಗೆ ರದ್ದು ಮಾಡುವುದರ ಜತೆಗೆ ದಂಡವನ್ನು ವಿಧಿಸಲಾಗುವುದು ಎಂದು ಖಡಕ್ ಸೂಚನೆ ನೀಡಿದರು.

ನಗರಸಭೆ ಅಭಿಯಂತರ ಕಂಬಳಿ, ಹಿರಿಯ ಆರೋಗ್ಯ ನಿರೀಕ್ಷಕ ಸುರೇಶ್, ಕಂದಾಯಾಧಿಕಾರಿ ಸಂತೋಷ್ ಹಾಜರಿದ್ದರು.

Facebook Comments