ಮಧು ಬಂಗಾರಪ್ಪ ಗೆಲುವು ನಿಶ್ಚಿತ : ಗೀತಾ ಶಿವರಾಜ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ, ಏ.9- ಮಧು ಬಂಗಾರಪ್ಪ ನನ್ನ ತಂದೆಯಂತೆಯೇ ಜನರ ಮಧ್ಯೆಯೇ ಬೆಳೆಯುತ್ತಿದ್ದಾನೆ, ಅವರ ಏಳಿಗೆಗೆ ದುಡಿಯುತ್ತಿದ್ದಾನೆ ಎಂದು ಗೀತಾ ಶಿವರಾಜ್‍ಕುಮಾರ್ ಇಂದಿಲ್ಲಿ ಹೇಳಿದರು.

ಸಹೋದರ ಮಧು ಬಂಗಾರಪ್ಪ ಪರವಾಗಿ ಇಂದು ಪ್ರಚಾರ ಕೈಗೊಂಡ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಮೈತ್ರಿ ಸರ್ಕಾರ ರಾಜ್ಯದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಈಗ ಕಾಂಗ್ರೆಸ್ ಕೂಡ ಬೆಂಬಲ ನೀಡಿರುವುದರಿಂದ ಗೆಲುವು ನಿಶ್ಚಿತ ಎಂದು ಹೇಳಿದರು.

ರೈತರಿಗಾಗಿ ಮಧು ಸದಾ ಶ್ರಮಿಸುತ್ತಾರೆ. ಈಗಾಗಲೇ 6 ಸಾವಿರ ರೈತರಿಗೆ ಬಗರ್ ಹುಕುಂ ಯೋಜನೆಯಡಿ ಜಮೀನು ಕೊಡಿಸಿದ್ದಾರೆ. ನೀರಾವರಿ ಯೋಜನೆಗಳಿಗಾಗಿ ಸುಮಾರು 247 ಕೋಟಿ ಅನುದಾನ ತಂದಿದ್ದಾರೆ. ಇನ್ನಷ್ಟು ಸೇವೆ ಮಾಡಲು ತಂದೆ (ಬಂಗಾರಪ್ಪ)ಯ ಹಾದಿಯನ್ನೇ ತುಳಿಯುತ್ತಿರುವ ಇವರು ಮುಂದೆ ಜನನಾಯಕನಾಗಿ ಬೆಳೆಯುತ್ತಾರೆ ಎಂದು ಗೀತಾ ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ