ಮೇಲ್ಮನೆಯಲ್ಲಿ ಪ್ರತಿಧ್ವನಿಸಿದ ಜಿಲೆಟಿನ್ ಸೋಟ ಪ್ರಕರಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.4- ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿ ಬಂಡೆಯ ಹಿರೇನಾಗವಲ್ಲಿ ಗ್ರಾಮದ ಬಳಿ ಜಿಲೆಟಿನ್ ಮತ್ತಿತರ ವಸ್ತು ಸೋಟಗೊಂಡು 6 ಮಂದಿ ಸಾವನ್ನಪ್ಪಿರುವ ಘಟನೆ ವಿಧಾನ ಪರಿಷತ್‍ನಲ್ಲಿಂದು ಪ್ರತಿಧ್ವನಿಸಿತು.ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಒಂದು ತಿಂಗಳ ಅವಯಲ್ಲಿ ಎರಡು ಘಟನೆ ಜರುಗಿದೆ.

ಶಿವಮೊಗ್ಗದಲ್ಲಿ ಸೋಟ ಪ್ರಕರಣ ನಡೆದು ಅಮೂಲ್ಯವಾದ ಜೀವವನ್ನು ಜನರು ಕಳೆದುಕೊಂಡರು. ಸೋಟಕ ವಸ್ತು ಬಳಕೆ ಬಗ್ಗೆ ಬಿಗಿಯಾದ ನಿಯಮಾವಳಿ ಇಲ್ಲದೆ ಮಾರ್ಗಸೂಚಿ ಇದ್ದರೂ ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ. ಸಾರ್ವಜನಿಕರ ಜೀವ ಮತ್ತು ಸಂಪತ್ತು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪದಲ್ಲಿ ಆರೋಪಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರ ಸಾರ್ವಜನಿಕ ಮಹತ್ವದ್ದಾಗಿದ್ದು, ಚರ್ಚೆಗೆ ಅವಕಾಶ ಕೊಡಬೇಕು. ಈ ಸರ್ಕಾರಕ್ಕೆ ಪಂಚೇಂದ್ರಿಯಗಳಿವೆಯೋ, ಇಲ್ಲವೋ ಎಂಬ ಅನುಮಾನವಿದೆ ಎಂದು ಟೀಕಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ನಿಲುವಳಿ ಸೂಚನೆ ಬದಲಿಗೆ ನಿಯಮ 68ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.

Facebook Comments

Sri Raghav

Admin