ಅಮೇರಿಕಾದಲ್ಲಿ ಕಫ್ರ್ಯೂ-ಸೇನೆಗೆ ಜಗ್ಗದ ಲಕ್ಷಾಂತರ ಮಂದಿಯಿಂದ ಪ್ರತಿಭಟನೆ ಮುಂದುವರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜೂ.3-ಪೊಲೀಸರ ದೌರ್ಜನ್ಯದಿಂದ ಕಪ್ಪುವರ್ಣೀಯ ವ್ಯಕ್ತಿ ಜಾರ್ಜ್ ಪ್ರೋಯ್ಡ್ ಮೃತಪಟ್ಟ ನಂತರ ಅಮೆರಿಕದಲ್ಲಿ ಭುಗಿಲೆದ್ದಿರುವ ಕಪ್ಪು ವರ್ಣೀಯರ ಹಿಂಸಾತ್ಮಕ ಪ್ರತಿಭಟನೆ ಇಂದು ಕೂಡ ಮುಂದುವರಿದಿದೆ.

ಸುಮಾರು 50 ರಾಜ್ಯಗಳ 150ಕ್ಕೂ ಹೆಚ್ಚು ನಗರಗಳಲ್ಲಿ ಲಕ್ಷಾಂತರ ಮಂದಿ ಕಫ್ರ್ಯೂ ಮತ್ತು ಸೇನೆ-ಪೊಲೀಸರಿಗೆ ಜಗ್ಗದೇ ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಹಿಂಸಾಚಾರದಲ್ಲಿ ಈವರೆಗೆ 14ಕ್ಕೂ ಹೆಚ್ಚು ಮಂದಿ ಹತರಾಗಿದ್ದು, ಸಾರ್ವಜನಿಕರ ಆಸ್ತಿಪಾಸ್ತಿಗಳು ಮತ್ತು ನೂರಾರು ವಾಹನಗಳು ಅಗ್ನಿಗಾಹುತಿಯಾಗಿವೆ. ಬೃಹತ್ ವಾಣಿಜ್ಯ ಸಂಕೀರ್ಣಗಳಲ್ಲಿ ಲೂಟಿ ಮುಂದುವರಿದಿದೆ.

ಈ ಸಂಬಂಧ ಸಹಸ್ರಾರು ಜನರನ್ನು ಪೊಲೀಸರು ಬಂಧಿಸಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ಕಫ್ರ್ಯೂ ವಿಧಿಸಲಾಗಿದೆ.  ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಿಂಸೆಗಿಳಿದಿರುವ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸೇನೆ ನಿಯೋಜಿಸುವುದಾಗಿ ಎಚ್ಚರಿಕೆ ನೀಡಿದ್ದರೂ, ಲೆಕ್ಕಿಸದೇ ಲಕ್ಷಾಂತರ ಜನರು ಇಂದು ಕೂಡ ಉಗ್ರ ಪ್ರತಿಭಟನೆ ಮುಂದುವರಿಸಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಪೊಲೀಸ್ ವಶದಲ್ಲಿ ಜಾರ್ಜ್ ಮೃತಪಟ್ಟ ನಂತರ ಅಮೆರಿಕದ ಸುಮಾರು 50 ರಾಜ್ಯಗಳ 150ಕ್ಕೂ ಹೆಚ್ಚು ನಗರಗಳು ಅಕ್ಷರಷಃ ರಣರಂಗವಾಗಿ ಹೊತ್ತಿ ಉರಿಯುತ್ತಿದೆ. ಇದರ ಬಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ತಟ್ಟಿದೆ.

ಕಫ್ರ್ಯೂ ಉಲ್ಲಂಘಿಸಿ ವಾಷಿಂಗ್ಟನ್, ನ್ಯೂಯಾರ್ಕ್, ನ್ಯೂಜೆರ್ಸಿ, ಚಿಕಾಗೋ, ಸ್ಯಾನ್‍ಫ್ರಾನ್ಸಿಸ್ಕೋ, ಕ್ಯಾಲಿಪ್ರೋರ್ನಿಯಾ, ಫಿಲಿಡೆರ್ಲಪಿಯಾ, ಡೆಟ್ರಾಯಿಟ್, ಮಿಚಿಗನ್, ಮಿನ್ನಿಸೋಟಾ, ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪ್ರತಿಭಟನಾಕಾರರು ಹಿಂಸಾಚಾರ ಮುಂದುವರಿಸಿದ್ದಾರೆ.

ಸಹಸ್ರಾರು ಮಂದಿ ಜಾರ್ಜ್ ಪ್ರೋಯಿಡ್‍ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದು, ಮತ್ತೊಂದೆಡ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಹಲವೆಡೆ ಇಂದು ಕೂಡ ಲೂಟಿ ಮತ್ತು ಹಿಂಸಾಚಾರ ಮರುಕಳಿಸಿದೆ.  ಅಮೆರಿದಕ ಬಹುತೇಕ ಕಡೆಗಳಲ್ಲಿ ನಡೆದ ಹಿಂಸಾಚಾರ, ಹತ್ಯೆ, ಲೂಟಿ ಪ್ರಕರಣಗಳ ಸಂಬಂಧ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ.

ಅನೇಕ ನಗರಗಳಲ್ಲಿ ಕಫ್ರ್ಯೂ ವಿಧಿಸಲಾಗಿದ್ದರೂ, ಸಾವಿರಾರು ಜನರು ಬೀದಿಗಿಳಿದು ದೊಡ್ಡ ಮಾಲ್‍ಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಮೇಲೆ ದಾಳಿ ನಡೆಸಿ ಮನಸೋಇಚ್ಛೆ ಲೂಟಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ಬಂದರನ್ನು ನಿರ್ದಯವಾಗಿ ಕೊಲ್ಲುತ್ತಿದ್ದಾರೆ. ಹಲವೆಡೆ ಪೊಲೀಸರು ಮತ್ತು ಉದ್ರಿಕ್ತ ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ.

ಕೊರೊನಾ ಹಾವಳಿಯಿಂದ ಈಗಾಗಲೇ ಅಪಾರ ಸಾವು-ನೋವಿಗೆ ಕಾರಣವಾಗಿರುವ ಅಮೆರಿಕದಲ್ಲಿ ಪ್ರತಿಭಟನೆಕಾರರು ಸಾಮಾಜಿಕ ಅಂತರ ಕಾಯ್ಡುಕೊಳ್ಳದೇ ಹಿಂಸೆಗೆ ಇಳಿಸಿದ್ದು, ಸೋಂಕು ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಅಮೆರಿಕದ ಮಿನ್ನೆಸೋಟಾ ನಗರದಲ್ಲಿ ಖೋಟಾನೋಟು ಚಲಾವಣೆ ಆರೋಪದ ಮೇಲೆ ಕಪ್ಪು ಜನಾಂಗದ ಜಾರ್ಜ್ ಫ್ಲೈಯ್ಡ್ ಎಂಬಾನನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಆತನ ಕುತ್ತಿಗೆಯನ್ನು ಮಂಡಿಗಳ ಮಧ್ಯೆ ಎಂಟು ನಿಮಿಷಗಳ ಕಾಲ ಅದುಮಿಟ್ಟಿಟ್ಟರು. ಉಸಿರುಗಟ್ಟಿ ಜಾರ್ಜ್ ಮೃತಪಟ್ಟ ನಂತರ ಮಿನ್ಸಿಸೋಟಾದಲ್ಲಿ ಆರಂಭವಾದ ಕಪ್ಪು ಜನರ ಪ್ರತಿಭಟನೆ ಅಮೆರಿಕವನ್ನು ವ್ಯಾಪಿಸಿದೆ.

Facebook Comments