ಡಿ.1ರವರೆಗೆ ಮತ್ತೆ ಲಾಕ್‍ಡೌನ್..!

ಈ ಸುದ್ದಿಯನ್ನು ಶೇರ್ ಮಾಡಿ

ಜರ್ಮನಿ,ಅ.29- ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿ ಕೊರೊನಾ ಕೆಲವು ದೇಶಗಳಲ್ಲಿ ನಿಯಂತ್ರಣದಲ್ಲಿದ್ದರೂ ಇನ್ನು ಕೆಲವು ದೇಶಗಳಲ್ಲಿ ತನ್ನ ಅಬ್ಬರವನ್ನು ಮುಂದುವರೆಸಿದ್ದು ಆತಂಕಕಾರಿಯಾಗಿದೆ. ಕೊರೊನಾ ಮಹಾಮಾರಿಯನ್ನು ತಡೆಯಲು ಆಯಾ ದೇಶಗಳಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದರೂ ಇದರ ಕಾಟ ಕಡಿಮೆಯಾಗದಿರುವುದರಿಂದ ಕೆಲವು ದೇಶಗಳಲ್ಲಿ ಮತ್ತೆ ಲಾಕ್‍ಡೌನ್ ಏರಿಕೆ ಮಾಡಲು ಸರ್ಕಾರಗಳು ಮುಂದಾಗಿವೆ.

ಜರ್ಮನಿ ಹಾಗೂ ಫ್ರಾನ್ಸ್ ಗಳಲ್ಲಿ ಕೊರೊನಾ ಮಹಾಮಾರಿಯ ಕಾಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದರಿಂದ ಆ ದೇಶಗಳಲ್ಲಿ 2ನೇ ಲಾಕ್‍ಡೌನ್ ಮಾಡಲು ಚಿಂತಿಸಿದೆ. ಜರ್ಮನ್‍ನ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರು ಈಗಾಗಲೇ ಡಿಸೆಂಬರ್‍ವರೆಗೆ ಲಾಕ್‍ಡೌನ್ ಅನ್ನು ಘೋಷಿಸಿದ್ದಾರೆ. ಆದರೆ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಂಡು ಶಾಲೆಗಳನ್ನು ನಡೆಸಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.

ಫ್ರಾನ್ಸ್‍ನಲ್ಲಿ ದಿನನಿತ್ಯ 36 ಸಾವಿರ ಮಂದಿಯಲ್ಲಿ ಕೊರೊನಾ ಕೇಸ್‍ಗಳು ಪತ್ತೆಯಾಗುತ್ತಿರುವುದರಿಂದ ಅಧ್ಯಕ್ಷ ಇಮ್ಯೂನ್ಯುಯಲ್ ಮಾಕ್ರನ್ ಅವರು ಕೂಡ ಡಿಸೆಂಬರ್ 1ರವರೆಗೆ ಲಾಕ್‍ಡೌನ್ ಜಾರಿ ಮಾಡಿದ್ದಾರೆ.

Facebook Comments