ವಿದ್ಯುತ್ ಬಿಲ್‌ನಲ್ಲೇ ಶಾಕ್ ನೀಡಿದ ಜೆಸ್ಕಾಂ, ಮನೆಗಳಿಗೆ ಲಕ್ಷ-ಲಕ್ಷ ಬಿಲ್

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ, ಜ.24-ಬಳ್ಳಾರಿ ಜಿಲ್ಲಾ ಸಿರಗುಪ್ಪ ನಿವಾಸಿಗಳಿಗೆ ವಿದ್ಯುತ್ ಶಾಕ್. ಸುಮಾರು 100 ಮನೆಗಳಿಗೆ ತಲಾ ಒಂದು ಲಕ್ಷದಷ್ಟು ವಿದ್ಯುತ್ ಬಿಲ್ ಬಂದಿದೆ. ಕೆಲವು ಮನೆಗಳಿಗೆ 5 ಲಕ್ಷದಷ್ಟು ವಿದ್ಯುತ್ ಬಿಲ್ ನೀಡಲಾಗಿದೆ. ಇದನ್ನು ನೋಡಿ ಮನೆಯವರು ಶಾಕ್‍ಗೆ ಒಳಗಾಗಿದ್ದಾರೆ.

200-300, 500 ರೂ. ವಾಣಿಜ್ಯ ಇದ್ದರೆ 1000ದಷ್ಟು ವಿದ್ಯುತ್ ಬಿಲ್ ಕಟ್ಟುತ್ತಿದ್ದ ಜನರಿಗೆ ಏಕಾಏಕಿ ಒಂದು ಲಕ್ಷ ವಿದ್ಯುತ್ ಬಿಲ್ ನೀಡಿರುವ ಜೆಸ್ಕಾಂ ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ಪ್ರಮಾಣದ ಬಿಲ್ಲನ್ನು ಕಟ್ಟುವುದು ಹೇಗೆ ಎಂದು ಕಚೇರಿಯ ಬಳಿ ಹೋಗಿ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

ಇದೇನು ಕಣ್ತಪ್ಪಿನಿಂದಾಗಿರುವುದೇ ಅಥವಾ ಉದ್ದೇಶ ಪೂರ್ವಕವಾಗಿರುವುದೇ ಎಂಬ ಬಗ್ಗೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಒಂದೆರಡು ಮನೆಯವರಿಗೆ ಈ ರೀತಿ ಬಿಲ್ ಬಂದಿದ್ದರೆ ಪರವಾಗಿಲ್ಲ ಆದರೆ 100ಕ್ಕೂ ಹೆಚ್ಚು ಮನೆಗಳಿಗೆ ಇಷ್ಟು ಪ್ರಮಾಣದ ವಿದ್ಯುತ್ ಬಿಲ್ ನೀಡಲಾಗಿದೆ.

Facebook Comments