ಚೀನಾ ಯೋಧರಿಗೆ ಆಘಾತ ನೀಡಲು ಭಾರತದ ಘಾತಕ್ ಕಮ್ಯಾಂಡ್‍ಗಳ ನಿಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

ಗಾಲ್ವಾನ್ ಕಣಿವೆ (ಪೂರ್ವ ಲಡಾಖ್), ಜೂ.29-ಇಂಡೋ-ಚೀನಾ ಗಡಿ ಭಾಗದಲ್ಲಿ ಉಭಯ ದೇಶಗಳ ನಡುವೆ ತಲೆದೋರಿರುವ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲೇ ಸೇನಾಪಡೆಗಳ ಜಮಾವಣೆ ಹೆಚ್ಛಾಗುತ್ತಿದ್ದು ಕದನ ಕಾರ್ಮೋಡಗಳು ದಟ್ಟವಾಗಿವೆ.

ಗಡಿ ಸರಹದ್ದಿನಲ್ಲಿ ಪದೇ ಪದೇ ತಗಾದೆಯ ಕಿರುಕುಳ ನೀಡುತ್ತಿರುವ ಚೀನಾ ಸೇನಾಪಡೆಗೆ ಬಿಸಿ ಮುಟ್ಟಿಸಲು ಸಜ್ಜಾಗಿರುವ ಭಾರತೀಯ ಸೇನೆಗೆ ನೆರವಾಗಲು ವಿಶೇಸ ಪರಿಣಿತಿ ಪಡೆದಿರುವ ಪಡೆಗಳನ್ನು ಲಡಾಕ್‍ನ ವಾಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ನಿಯೋಜಿಸಲಾಗಿದೆ.

ಲಡಾಕ್ ಗೆಡಿಯಲ್ಲಿರುವ ಚೀನಿ ಯೋಧರಿಗೆ ಸಮರ ಕಲೆಗಳ ಬಗ್ಗೆ ವಿಶೇಷ ತರಬೇತಿ ನೀಡಲು 20 ಮಾರ್ಷಲ್ ಆಟ್ರ್ಸ್ ಎಕ್ಸ್‍ಪರ್ಟ್‍ಗಳನ್ನು ಚೀನಾ ರವಾನಿಸಿ ಟ್ರೈನಿಂಗ್ ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತವು ಘಾತಕ್ ಪಡೆಯ ವಿಶೇಷ ಕಮ್ಯಾಂಡೋಗಳನ್ನು ಟಿಬೆಟ್ ಸರಹದ್ದಿನಲ್ಲಿ ನಿಯೋಜಿಸಿ ಚೀನಾದ ಪಿಎಲ್‍ಎ ಸೇನೆಗೆ ದೊಡ್ಡ ಆಘಾತ ನೀಡಲು ಸಜ್ಜಾಗಿದೆ.

ಭಾರತದ ವಿಶೇಷ ಸೇನಾ ಪಡೆಗಳೊಂಅಮೆರಿಕ ಸೇನಾಪಡೆಗಳು ಈಗ ರಂಗಪ್ರವೇಶಿಸಿರುವುದರಿಂದ ಚೀನಾದ ಯೋಧರು ಹೆದರಿ ಕಂಗಲಾಗಿದ್ದಾರೆ. ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಯೋಧರು ನಡುವೆ ಭುಗಿಲೆದ್ದ ಹಿಂಸಾತ್ಮಕ ಸಂಘರ್ಷದ ನಂತರ ಗಡಿ ಭಾಗದಲ್ಲಿ ಭಾರತ-ಚೀನಾದ ಭಾರೀ ಸಂಖ್ಯೆಯ ಹೋಧರು ಮತ್ತು ಅಗಾಧ ಯುದ್ಧಾಸ್ತ್ರಗಳು ಜಮಾವಣೆಗೊಂಡು ಯುದ್ದದ ಕಾರ್ಮೋಡಗಳು ದಟ್ಟವಾಗಿವೆ.

ಇದೇ ಸಂದರ್ಭದಲ್ಲಿ ಅಮೆರಿಕ ಸೇನಾಪಡೆ ಭಾರತದ ಬೆನ್ನಿಗೆ ನಿಂತಿರುವುದು ಚೀನಾ ಕಂಪಿಸುವಂತಾಗಿದೆ. ಉಭಯ ದೇಶಗಳ ನಡುವಣ ಉನ್ನತ ಸೇನಾಧಿಕಾರಿಗಳ ನಡುವಣ ಒಪ್ಪಂದದಂತೆಕೆಲವು ಸೂಕ್ಷ್ಮ ಪ್ರದೇಶಗಳಿಂದ ಹಿಂದಕ್ಕೆ ಸರಿಯುವ ಬದಲು ಚೀನಾ ತನ್ನ ಸೈನಿಕರು ಮತ್ತು ಯುದ್ಧಾಸ್ತ್ರಗಳ ಜಮಾವಣೆ ಮುಂದುವರಿಸಿ ಗಡಿಯಲ್ಲಿ ಮತ್ತೆ ಖ್ಯಾತೆ ತೆಗೆದಿದೆ.

ಇದಕ್ಕೆ ಪ್ರತಿಯಾಗಿ ಚೀನಾಗೆ ತಿರುಗೇಟು ನೀಡಲು ಭಾರತವೂ ಸಜ್ಜಾಗಿದ್ದು, ಭಾರೀ ಪ್ರಮಾಣದ ಯೋಧರು ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಗಡಿಯಲ್ಲಿ ಮತ್ತೆ ಕದನ ಕಾರ್ಮೋಡಗಳು ಕವಿದಿವೆ. ಭಾರತಕ್ಕೆ ಅನೇಕ ದೇಶಗಳು ಬೆಂಬಲ ನೀಡಿದ್ದು, ಅಮೆರಿಕ ಸೇನೆಯನ್ನು ಭಾರತದ ನೆರವಿಗೆ ರವಾನಿಸಿರುವುದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜೂನ್ 15ರಂದು 20 ಭಾರತೀಯ ಯೋಧರು ಹುತ್ಮಾತರಾದ ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯ ವಾಸ್ತವ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಈಗಲೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) ಸೈನಿಕರು ಮತ್ತು ಯುದ್ಧಾಸ್ತ್ರಗಳು ಜಮಾವಣೆಗೊಂಡಿವೆ. ಭಾರತದ ಮೂರು ಸಶಸ್ತ್ರ ಪಡೆಗಳಾದ ಅರ್ಮಿ, ನೇವಿ ಮತ್ತು ಏರ್‍ಫೆರ್ಪೋರ್ಸ್ ಈಗ ಚೀನಾವನ್ನು ಸುತ್ತುವರಿದಿರುವುದು ಕಮ್ಯೂನಿಸ್ಟ್ ರಾಷ್ಟ್ರಕ್ಕೆ ನಡುಕ ಉಂಆಂತಗಿದೆ.

ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಯೋಧರು ಗಡಿಯಲ್ಲಿ ದುಸ್ಸಾಹಸಕ್ಕೆ ಮುಂದಾದರೆ ಮುಲಾಜಿಲ್ಲದೇ ದಿಟ್ಟ ಪ್ರತ್ಯುತ್ತರ ನೀಡಲು ಭಾರತೀಯ ಸೇನಾಪಡೆಗಳಿಗೆ ಕೇಂದ್ರ ಸರ್ಕಾರ ಪೂರ್ಣಾಧಿಕಾರ ನೀಡಿದ್ದು, ಕಮ್ಯೂನಿಸ್ಟ್ ದೇಶದ ಸೈನಿಕರಿಗೆ ತಕ್ಕ ಪಾಠ ಕಲಿಸಲು ಭಾರತದ ಮೂರು ಸಶಸ್ತ್ರಪಡೆಗಳು ಸರ್ವ ಸನ್ನದ್ಧವಾಗಿವೆ.

ಭಾರತ ಸೇನಾ ಪಡೆಯ ಅಗಾಧ ಬಲ, ಅಮೆರಿಕ ಸೇನೆ ಬೆಂಬಲ ಮತ್ತು ಇತರ ದೇಶಗಳು ಭಾರತಕ್ಕೆ ನೀಡುತ್ತಿರುವ ಸಾಥ್‍ನಿಂದ ಚೀನಿ ಅಧ್ಯಕ್ಷ ಕ್ಷಿ ಜಿನ್‍ಪಿಂಗ್ ಒಳಗೊಳಗೆ ಕಂಪಿಸುತ್ತಿದ್ದಾರೆ.

Facebook Comments