ಘಾಟಿ ಸುಬ್ರಹ್ಮಣ್ಯ ದೇಗುಲದ ಹುಂಡಿಯಲ್ಲಿ 63.83 ಲಕ್ಷ ಕಾಣಿಕೆ ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ದೊಡ್ಡಬಳ್ಳಾಪುರ, ಏ.3- ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದ ಹುಂಡಿಯಲ್ಲಿ ಯೂರೋಪ್, ಮಲೇಷಿಯಾ, ಅಮೆರಿಕಾ, ದುಬೈ ದೇಶದ ಕರೆನ್ಸಿ ಸೇರಿದಂತೆ 63,83,971 ಮೊತ್ತದ ಕಾಣಿಗೆ ಹಣ ಸಂಗ್ರಹವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ದಲ್ಲಿ ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಕ್ಷೀಣವಾಗಿತ್ತು.

ಹೀಗಾಗಿ ಹುಂಡಿಯ ಸಂಗ್ರಹದಲ್ಲಿ ಕಡಿಮೆಯಾಗಿದ್ದು, ಹುಂಡಿ ಎಣಿಕೆ ನಡೆಯಿತು. 10 ಗ್ರಾಂ ಚಿನ್ನ , 2600 ಗ್ರಾಂ ಬೆಳ್ಳಿ ವಸ್ತುಗಳು, ಚಿನ್ನ, ನಿಷೇಧಿತ 500, 1000 ಮುಖ ಬೆಲೆಯ 23 ನೋಟುಗಳು, ವಿದೇಶಿ ಕರೆನ್ಸಿಗಳು, 10 ಡಾಲರ್ ಓಮನ್, ಕೀನ್ಯಾ ದೇಶದ 32 ನೋಟುಗಳು ಪತ್ತೆಯಾಗಿವೆ.

ಆಡಳಿತಾಧಿಕಾರಿ ಕೃಷ್ಣಪ್ಪ ಅವರ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆದಿದ್ದು , ಸಂಪೂರ್ಣ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

Facebook Comments