3 ಕಿ.ಮೀ. ಉದ್ದ ಕಾಲುವೆ ತೋಡಿದ್ದ ರೈತನಿಗೆ ಟ್ರ್ಯಾಕ್ಟರ್ ಗಿಫ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಪಟ್ನಾ, ಸೆ.20- ಆಧುನಿಕ ಭಗೀರಥ ದಶರಥ ಮಾಂಜಿ ಗುಡ್ಡ ಕೊರೆದು ಉತ್ತಮ ರಸ್ತೆಯನ್ನು ನಿರ್ಮಿಸಿದಂತೆ, ಇಲ್ಲೊಬ್ಬ ಶ್ರಮಿಕ ರೈತ 30 ವರ್ಷಗಳಿಂದ 3 ಕಿ.ಮೀ. ಉದ್ದ ಕಾಲುವೆ ತೋಡಿದ ಆತನ ಶ್ರಮವನ್ನು ಗುರುತಿಸಿ ಮಹೀಂದ್ರಾ ಸಂಸ್ಥೆಯಿಂದ ಟ್ರ್ಯಾಕ್ಟರ್ ಉಡುಗೊರೆ ಸಿಕ್ಕಿದೆ.

ಬಿಹಾರದ ಗಯಾ ಜಿಲ್ಲೆಯ ರೈತ ಲಾಂಗಿ ಭುಯಾನ್ ತನ್ನ ಕೃಷಿ ಭೂಮಿಗೆ ನೀರು ಹರಿಸುವ ಸಲುವಾಗಿ ಸುಮಾರು 30 ವರ್ಷಗಳಿಂದಲೂ ಏಕಾಂಗಿಯಾಗಿ ಕಾಲುವೆಯನ್ನು ತೋಡುತ್ತ ಬಂದಿದ್ದು ಈಗ ಅದರ ಉದ್ದ 3 ಕಿ.ಮೀ. ಆಗಿದೆ.

ಲಾಂಗಿ ಭುಯಾನ್‍ರ ಈ ಪ್ರಯತ್ನದ ಬಗ್ಗೆ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ಇಡೀ ರಾಜ್ಯವೇ ಮಾತನಾಡಿಕೊಳ್ಳುವಂತಾಗಿದ್ದು, ಇದೀಗ ಶ್ರಮಿಕ ರ ಶ್ರಮವನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿರುವ ಮಹೀಂದ್ರಾ ಸಂಸ್ಥೆಯು ಭುಯಾನ್‍ಗೆ ಟ್ರ್ಯಾಕ್ಟರ್ ನೀಡುವ ಮೂಲಕ ಅವರಿಗೆ ನೆರವಾಗಿದೆ.

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ನೀಡಿರುವ ಟ್ರ್ಯಾಕ್ಟರ್ ಅನ್ನು ಸಂಸ್ಥೆಯ ಪ್ರಾದೇಶಿಕ ವ್ಯಾಪಾರಿ ಸಿದ್ಧಿನಾಥ್ ವಿಶ್ವಕರ್ಮ ಅವರು ಲಾಂಗಿಗೆ ಹಸ್ತಾಂತರಿಸಿದ್ದಾರೆ.

Facebook Comments