ಬೆಕ್ಕಿನ ಮರಿಗಾಗಿ ಪ್ರಾಣಬಿಟ್ಟ ಬಾಲಕ..!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ,ಆ.14- ಬೆಕ್ಕಿನ ಮರಿಯನ್ನು ಕೊಡಿಸಲು ತಾಯಿ ಒಪ್ಪದ ಕಾರಣ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಜಿಯಾಬಾದ್‍ನಲ್ಲಿ ನಡೆದಿದೆ.

ಮೃತ ಬಾಲಕ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದು ಕೊರೊನಾ ವೈರಸ್‍ನಿಂದ ಮನೆಯಲ್ಲೇ ಉಳಿದಿರುವ ಆತ ಕಳೆದೆರಡು ದಿನಗಳಿಂದ ಮನೆಗೆ ಬೆಕ್ಕನ್ನು ತರುವಂತೆ ತಾಯಿಯನ್ನು ಕೇಳಿದ್ದಾನೆ.

ನಿಮ್ಮ ತಂದೆ ಚೀನಾದಲ್ಲಿದ್ದಾರೆ, ಅವರು ಮನೆಗೆ ಬಂದ ನಂತರ ಬೆಕ್ಕಿನ ಮರಿ ಕೊಡಿಸುವುದಾಗಿ ತಾಯಿ ಹೇಳಿದ್ದಾರೆ, ಇದಕ್ಕೆ ಒಪ್ಪದ ಮಗ ನನಗೆ ಈಗಲೇ ಬೆಕ್ಕಿನ ಮರಿ ಬೇಕೆಂದು ಹಠ ಹಿಡಿದಿದ್ದಾನೆ, ಆದರೆ ತಾಯಿ ಇದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿರಲಿಲ್ಲ.

ಮನೆಗೆ ಬೆಕ್ಕಿನ ಮರಿಯನ್ನು ತರಬೇಕೆಂಬ ಕನಸು ಈಡೇರಲಿಲ್ಲ ಎಂದು ನೊಂದ ಬಾಲಕ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗ್ಗೆ ತಾಯಿ ರೂಮಿನ ಬಾಗಿಲು ತೆರೆದು ನೋಡಿದಾಗ ಮಗ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಬಾಲಕನ ಸಾವಿನ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin