ನಾನು ಗೋಪಾಲಯ್ಯ ಬಗ್ಗೆ ಟೀಕೆ ಮಾಡಿಲ್ಲ : ಗಿರೀಶ್ ನಾಶಿ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.8- ಯಾರನ್ನೋ ಕುರಿತು ದುಷ್ಟರೆಂದು ಟೀಕೆ ಮಾಡಿಲ್ಲ. ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಹೋದ ಭಕ್ತರು, ಸಾಮಾನ್ಯವಾಗಿ ದುಷ್ಟ ಶಿಕ್ಷೆ , ಶಿಷ್ಟ ರಕ್ಷೆಯಾಗಲಿ ಎಂದು ಬೇಡಿಕೊಳ್ಳುತ್ತಾರೆ. ಅದನ್ನಷ್ಟೇ ನಾನು ಕೇಳಿಕೊಂಡಿದ್ದೇನೆ ಎಂದು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ.ನಾಶಿ ಹೇಳಿದ್ದಾರೆ.

ನನ್ನ ಹೇಳಿಕೆಯನ್ನು ಮಾಜಿ ಶಾಸಕ ಗೋಪಾಲಯ್ಯ ತಪ್ಪಾಗಿ ಭಾವಿಸಿದ್ದಾರೆ. ತಮ್ಮ ದುಷ್ಟತನದ ಬಗ್ಗೆ ಸಾಬೀತುಪಡಿಸಲು ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ನಾನು ಗೋಪಾಲಯ್ಯ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.

ಸಾಮಾನ್ಯವಾಗಿ ದೇವಸ್ಥಾನದಲ್ಲಿ ಏನು ಬೇಡಿಕೊಳ್ಳುತ್ತಾರೋ ಅದನ್ನಷ್ಟೇ ಬೇಡಿಕೊಂಡಿದ್ದೇನೆ ಎಂದು ಗಿರೀಶ್ ಕೆ.ನಾಶಿ ಸ್ಪಷ್ಟನೆ ನೀಡಿದ್ದಾರೆ. ಎಲ್ಲಿಂದಲೋ ಬಂದು 10 ಮನೆಯಲ್ಲಿ ಮತ ಕೇಳಿ ಗಿರೀಶ್ ಓಡಿ ಹೋಗಿದ್ದಾರೆ ಎಂದು ನನ್ನ ಬಗ್ಗೆ ಗೋಪಾಲಯ್ಯ ಹಗುರವಾಗಿ ಮಾತನಾಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ನನ್ನನ್ನೂ ಒಳಗೊಂಡಂತೆ ಶೇ.60ರಷ್ಟು ಮಂದಿ ಹೊರಗಿನಿಂದ ಬಂದವರೇ ವಾಸಿಸುತ್ತಿದ್ದಾರೆ. ನಾನು ಕ್ಷೇತ್ರದಲ್ಲೇ ಇದ್ದೇನೆ, ಕ್ಷೇತ್ರದಲ್ಲೇ ಇರುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

Facebook Comments

Sri Raghav

Admin