ದೇವರಿಗೆ ಹಚ್ಚಿದ ದೀಪ ತಂದ ಆಪತ್ತು, ಬಾಲಕಿ ಸಜೀವ ದಹನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಜೂ 25- ದೇವರಿಗೆ ಹಚ್ಚಿದ ದೀಪ ಹಾಸಿಗೆಗೆ ತಗುಲಿ ಹೊತ್ತಿ ಉರಿದ ಪರಿಣಾಮ 8 ವರ್ಷದ ಬಾಲಕಿ ಸಜೀವವಾಗಿ ದಹನಗೊಂಡ ದಾರುಣ ಘಟನೆ ಇಲ್ಲಿನ ಆನಿಗೋಳದಲ್ಲಿ ನಡೆದಿದೆ. ಕಸ್ತೂರಿ(8) ಮೃತ ದುರ್ದೈವಿ.

ಮನೆಯಲ್ಲಿದ್ದ ತಂದೆ ತಾಯಿ ಅಪಾಯದಿಂದ ಪಾರಾಗಿದ್ದು, ಇವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಳೆದ ರಾತ್ರಿ ಮಲಗಿದ ಸಂದರ್ಭದಲ್ಲಿ ದೇವರ ಮುಂದಿದ್ದ ದೀಪ ಹಾಸಿಗೆಗೆ ತಾಗಿ ಬೆಂಕಿ ಹತ್ತಿ ಮನೆ ಹೊತ್ತಿ ಉರಿದಿದೆ.

ಈ ಸಂದರ್ಭದಲ್ಲಿ ಹಾಸಿಗೆಯಲ್ಲಿ ಮಲಗಿದ್ದ ಮಗುವಿಗೆ ಬೆಂಕಿ ತಗುಲಿ ಸಜೀವವಾಗಿ ದಹನಗೊಂಡಿದೆ. ಟೀಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin