ಕಟ್ಟಡದಿಂದ ಬಿದ್ದು ಬಾಲಕಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.5- ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ತಮ್ಮ ಮನೆಯ ಅಪಾರ್ಟ್‍ಮೆಂಟಿನ 12ನೇ ಮಹಡಿ ಮೇಲಿಂದ ಬಿದ್ದು ಮೃತ ಪಟ್ಟಿರುವ ಘಟನೆ ಕಳೆದ ರಾತ್ರಿ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರ್ಥಿನಿ ತಮ್ಮ ಕುಟುಂಬದ ಜತೆ ವೇಣು ಗೋಪಾಲ ನಗರದ ಅಪಾರ್ಟ್‍ಮೆಂಟಿನ 13ನೇ ಮಹಡಿಯಲ್ಲಿ ವಾಸವಾಗಿದ್ದರು.

ರಾತ್ರಿ ಊಟಮಾಡಿದ ನಂತರ ಸುಮಾರು 10.30ರ ಸಮಯದಲ್ಲಿ ವಿದ್ಯಾರ್ಥಿನಿ 12ನೇ ಮಹಡಿಯಿಂದ ಬಿದ್ದು ಮೃತ ಪಟ್ಟಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೋ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.

ಸುದ್ದಿ ತಿಳಿದ ಹುಳಿಮಾವು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಗೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ತೆಯಲ್ಲಿ ಇಡಲಾಗಿದೆ.

Facebook Comments