ಹತ್ತು ದಿನದಲ್ಲಿ ಅಸೆಮಣೆ ಏರಬೆಕಿದ್ದ ಮದುಮಗಳು ಸೊಂಕಿಗೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ.ಮೇ‌12 ಮಹಾ ಮಾರಿಯಾರನ್ನೂ ಬಿಡೊಲ್ಲ.ಎಲ್ಲವೂ ಅಂದು ಕೊಂಡತೆ ನಡೆದಿದ್ದರೆ 23 ರಂದು ದಾಂಪತ್ಯ ಜಿವನಕ್ಕೆ ಕಾಲಿಡಬೆಕಾಗಿತ್ತು ಆದರೆ ಕರೋನಾ ಆ ಗಾಗಲು ಬಿಡಲಿಲ್ಲ ಮದುವೆಗೆ ಇನ್ನೂ 10 ದಿನ ವಿರುವಾಗಲೆ ವಧುವನ್ನು ಬಲಿ ಪಡೆದು ಕೊಂಡಿದೆ.
ಮುದ್ದೆಬಿಹಾಳ ಶ್ರುತಿ ಐಹೊಳೆ(25) ಕರೋನಾಗೆ ಬಲಿಯಾದ ಮಧುಮಗಳು.

ಬಿಎಸ್ಸಿ .ಬಿಎಡ್ ಪದವಿ ಧರೆಯಾಗಿದ್ದ ಶ್ರುತಿ ಮುದ್ದೆಬಿಹಾಳದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು ಇತ್ತಿಚೆಗೆ ಮದುವೆ ನಿಶ್ಚಯ ಮಾಡಲಾಗಿದ್ದು ಇದೆ 23 ರಂದು ಮದುವೆ ನಡೆಯಬೆಕಿತ್ತು ಇದಕ್ಕಾಗಿ ಆಭರಣ.ಬಟ್ಟೆ ಸೆರಿದಂತೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು.

ಆದರೆ ಇತ್ತಿಚೆಗೆ ಕರೋನಾ ಸೋಂಕು ತಗುಲಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ ಮೃತಳ ಪೋಷಕರಿಗೆ ದಿಕ್ಕೆ ತೊಚದಂತಾಗಿದೆ.

Facebook Comments