ಕ್ರೀಡಾಂಗಣದಲ್ಲೇ ಮದುವೆ ಪ್ರಪೋಸ್ ಮಾಡಿ ಪ್ರೇಯಸಿ ಮನಗೆದ್ದ ಕ್ರೇಜಿ ಬಾಯ್ ..!

ಈ ಸುದ್ದಿಯನ್ನು ಶೇರ್ ಮಾಡಿ

Marraige--01
ಲಾಡ್ರ್ಸ್ , ಜು.15- ಮದುವೆಗಳು ಸಾಮಾನ್ಯವಾಗಿ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳುತ್ತಾರೆ, ಆದರೆ ಕ್ರಿಕೆಟ್ ಮೈದಾನದಲ್ಲೂ ಲಗ್ನ ನಿಶ್ಚಯವಾಗುತ್ತದೆ ಎಂಬುದಕ್ಕೆ ಕ್ರಿಕೆಟ್‍ನ ಸ್ವರ್ಗವೆಂದೇ ಬಿಂಬಿಸಿಕೊಂಡಿರುವ ಲಾಡ್ರ್ಸ್ ಮೈದಾನ ಸಾಕ್ಷಿಯಾಗಿದೆ. ಇಂಗ್ಲೆಂಡ್ ಹಾಗೂ ಭಾರತ ನಡುವಿನ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಯುವಜೋಡಿಯು ಮದುವೆ ಆಗಲು ನಿರ್ಧರಿಸಿದ್ದು ಅಂತರ್ಜಾಲದಲ್ಲಿ ಸುದ್ದಿಗೆ ಗ್ರಾಸವಾಗಿದೆ.

ಭಾರತ ತಂಡದ ವಿರುದ್ಧ ಜೋ ರೂಟ್ ಹಾಗೂ ನಾಯಕ ಇಯೋನ್ ಮಾರ್ಗನ್ ಅವರು ಉತ್ತಮ ಜೊತೆಯಾಟವಾಡುವ ಮೂಲಕ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುತ್ತಿರುವಾಗಲೇ ಚರಣ್ ಗಿಲ್ ಹಾಗೂ ಪಾವನ ಬೈನ್ಸ್ ಅವರ ಪ್ರೇಮ ನಿವೇದನೆಯು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.
ಪಂದ್ಯದ 24ನೆ ಓವರ್‍ನಲ್ಲಿ ಪಾವನ ಮುಂದೆ ಚರಣ್ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದನು, ಅದಕ್ಕೆ ಸ್ಥಳದಲ್ಲೇ ಆಕೆ ಪ್ರೇಮ ನಿವೇದನೆಗೆ ಗ್ರೀನ್ ಸಿಗ್ನಲ್ ನೀಡಿದ್ದೆ ಅಲ್ಲದೆ ಮದುವೆಗೂ ಓಕೆ ಅಂದಿದ್ದಾರೆ.

ಕಾಮೆಂಟರಿ ಮಾಡುತ್ತಿದ್ದ ಇಂಗ್ಲೆಂಡ್‍ನ ಮಾಜಿ ಕ್ರಿಕೆಟಿಗ ಡೇವಿಡ್ ಲಾಯ್ಡ್ ಕೂಡ ಈ ದೃಶ್ಯದ ಬಗ್ಗೆ ಮಾಹಿತಿ ನೀಡಿದಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಎಲ್ಲ ಚಿತ್ತ ಇವರತ್ತ ಹರಿಯಿತು.
ಈಗ ಆ ದೃಶ್ಯಗಳು ಅಂತಾರ್ಜಾಲದಲ್ಲಿ ಸಾಕಷ್ಟು ಸುದ್ದಿಯಾಗಿದೆ, ಮುಂದೊಂದು ದಿನ ಕ್ರೀಡಾ ಮೈದಾನದಲ್ಲೇ ಮದುವೆಯೂ ನಡೆದರೆ ಆಶ್ಚರ್ಯವಿಲ್ಲ ಬಿಡಿ…!

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin